ADVERTISEMENT

ಪಿಬಿಎಲ್‌: ಎರಡನೇ ಸ್ಥಾನಕ್ಕೇರಿದ ಅವಧ್‌

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 20:24 IST
Last Updated 7 ಜನವರಿ 2019, 20:24 IST
ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಅವಧ್‌ ವಾರಿಯರ್ಸ್‌ ತಂಡದ ಲೀ ಡಾಂಗ್‌ ಕೆವುನ್‌ ಷಟಲ್‌ ಹಿಂತಿರುಗಿಸಲು ಪ್ರಯತ್ನಿಸಿದರು–ಪ್ರಜಾವಾಣಿ ಚಿತ್ರ/ಆರ್‌.ಶ್ರೀಕಂಠ ಶರ್ಮಾ
ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಅವಧ್‌ ವಾರಿಯರ್ಸ್‌ ತಂಡದ ಲೀ ಡಾಂಗ್‌ ಕೆವುನ್‌ ಷಟಲ್‌ ಹಿಂತಿರುಗಿಸಲು ಪ್ರಯತ್ನಿಸಿದರು–ಪ್ರಜಾವಾಣಿ ಚಿತ್ರ/ಆರ್‌.ಶ್ರೀಕಂಠ ಶರ್ಮಾ   

ಬೆಂಗಳೂರು: ನಿರ್ಣಾಯಕ ಹೋರಾಟದಲ್ಲಿ ಇಂಗ್ಲೆಂಡ್‌ನ ರಾಜೀವ್‌ ಔಸೆಫ್‌ ಅವರನ್ನು ಮಣಿಸಿದ ದಕ್ಷಿಣ ಕೊರಿಯಾದ ಸನ್‌ ವಾನ್‌ ಹೊ, ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ನ ಪಂದ್ಯದಲ್ಲಿ ಅವಧ್‌ ವಾರಿಯರ್ಸ್‌ ತಂಡಕ್ಕೆ ಗೆಲುವಿನ ಸಿಹಿ ಉಣಬಡಿಸಿದರು.

ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹಣಾಹಣಿಯಲ್ಲಿ ಅವಧ್‌ 4–3ಯಿಂದ ಚೆನ್ನೈ ಸ್ಮ್ಯಾಷರ್ಸ್‌ ತಂಡವನ್ನು ಪರಾಭವಗೊಳಿಸಿತು. ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 20ಕ್ಕೆ ಹೆಚ್ಚಿಸಿಕೊಂಡು ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.

ಪುರುಷರ ಡಬಲ್ಸ್‌ ವಿಭಾಗದ ‘ಟ್ರಂಪ್‌’ ಪಂದ್ಯದಲ್ಲಿ ಅವಧ್‌ ತಂಡದ ಯಾಂಗ್ ಲೀ ಮತ್ತು ಮಥಿಯಸ್‌ ಕ್ರಿಸ್ಟಿಯನ್‌ಸನ್‌ ಅವರು 15–8, 15–6ರಲ್ಲಿ ಕ್ರಿಸ್‌ ಅಡ್‌ಕಾಕ್‌ ಮತ್ತು ಬಿ.ಸುಮೀತ್‌ ರೆಡ್ಡಿ ಅವರನ್ನು ಸೋಲಿಸಿದರು.

ADVERTISEMENT

ಸಿಂಗಲ್ಸ್‌ ವಿಭಾಗದ ಹಣಾಹಣಿಯಲ್ಲಿ ಲೀ ಡಾಂಗ್‌ ಕೆವುನ್‌ 15–7, 15–13ರಲ್ಲಿ ವಿ ಫೆಂಗ್‌ ಚೊಂಗ್‌ ಅವರನ್ನು ಮಣಿಸಿ ಅವಧ್‌ಗೆ 3–0 ಮುನ್ನಡೆ ತಂದುಕೊಟ್ಟರು.

ಮಹಿಳಾ ಸಿಂಗಲ್ಸ್‌ ವಿಭಾಗದ ‘ಟ್ರಂಪ್‌’ ಹೋರಾಟ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಗೆದ್ದ ಚೆನ್ನೈ ತಂಡ 3–3ರಿಂದ ಸಮಬಲ ಸಾಧಿಸಿತು.

ನಿರ್ಣಾಯಕ ಹಣಾಹಣಿಯಲ್ಲಿ ಸನ್‌ ವಾನ್‌ 15–6, 15–6ರಲ್ಲಿ ರಾಜೀವ್‌ ಎದುರು ಗೆದ್ದು ಅವಧ್‌ ತಂಡದ ಸಂಭ್ರಮಕ್ಕೆ ಕಾರಣರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.