ನವದೆಹಲಿ: ಪ್ರತಿಭಾನ್ವಿತ ಡಿಫೆಂಡರ್, 26 ವರ್ಷ ವಯಸ್ಸಿನ ಸುಮಿತ್ ಸಂಗ್ವಾನ್ ಅವರನ್ನು ಪ್ರೊ ಕಬಡ್ಡಿ ಲೀಗ್‌ನ 12ನೇ ಆವೃತ್ತಿಯಲ್ಲಿ ಆಡುವ ತಂಡಕ್ಕೆ ನಾಯಕರನ್ನಾಗಿ ಯುಪಿ ಯೋಧಾಸ್ ಫ್ರಾಂಚೈಸಿಯು ಬುಧವಾರ ನೇಮಕ ಮಾಡಿದೆ. ಆಶು ಸಿಂಗ್ ಉಪನಾಯಕರಾಗಿದ್ದಾರೆ.
ಅನುಭವಿ ರೈಡರ್ ಪವನ್ ಸೆಹ್ರಾವತ್ ಅವರು ತಮಿಳ್ ತಲೈವಾಸ್ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಅರ್ಜುನ್ ದೇಸ್ವಾಲ್ ಉಪನಾಯಕರಾಗಿದ್ದಾರೆ.
ಪಟ್ನಾ ಪೈರೇಟ್ಸ್ ಫ್ರಾಂಚೈಸಿಯು ಅಂಕಿತ್ ಜಗ್ಲಾನ್ ಅವರನ್ನು ನಾಯಕ ರನ್ನಾಗಿ, ದೀಪಕ್ ಸಿಂಗ್ ಅವರನ್ನು ಉಪನಾಯಕರನ್ನಾಗಿ ಹೆಸರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.