ಮುಂಬೈ: ಪ್ರೊ ಕಬಡ್ಡಿ ಲೀಗ್‌ನ 12ನೇ ಆವೃತ್ತಿ ಆಗಸ್ಟ್ 29ರಂದು ಆರಂಭವಾಗಲಿದೆ ಎಂದು ಆಯೋಜಕರು ಬುಧವಾರ ತಿಳಿಸಿದ್ದಾರೆ.
ಹರಿಯಾಣ ಸ್ಟೀಲರ್ಸ್ ಹಾಲಿ ಚಾಂಪಿಯನ್ ಆಗಿದೆ. ಪಂದ್ಯಗಳು ನಡೆಯುವ ಸ್ಥಳ ಮತ್ತು ಇತರ ವಿವರಗಳನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಆಯೋಜಕರಾದ ಮಶಾಲ್ ಸ್ಫೋರ್ಟ್ಸ್ ಬುಧವಾರ ತಿಳಿಸಿದೆ. ಈ ಬಾರಿಯೂ 12 ತಂಡಗಳು ಕಣಕ್ಕಿಳಿಯಲಿವೆ.
ಮೇ 31 ಮತ್ತು ಜೂನ್ 1ರಂದು ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ 10 ಮಂದಿ ಆಟಗಾರರು ₹1 ಕೋಟಿಗೂ ಹೆಚ್ಚು ಮೌಲ್ಯ ಪಡೆದಿದ್ದು ಇದು ದಾಖಲೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.