
ಪಿ.ಆರ್. ಶ್ರೀಜೇಶ್
ನವದೆಹಲಿ: ಭಾರತದ ದಿಗ್ಗಜ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಅವರು ಭಾರತದ ಜೂನಿಯರ್ ಪುರುಷರ ಹಾಕಿ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ಮತ್ತೆ ಅರ್ಜಿ ಸಲ್ಲಿಸಿದ್ದಾರೆ.
ಶ್ರೀಜೇಶ್ ಅವರ ಒಪ್ಪಂದ ಡಿಸೆಂಬರ್ 21ರಂದು ಮುಕ್ತಾಯಗೊಂಡಿದೆ. ಕೋಚ್ ಸ್ಥಾನದಲ್ಲಿ ಮುಂದುವರಿಯಲು ಅವರು ಆಸಕ್ತಿ ತೋರಿಸಿದ್ದಾರೆ. ಅವರ ಅರ್ಜಿಯ ಕುರಿತು 15 ದಿನಗಳಲ್ಲಿ ನಿರ್ಧಾರವಾಗಲಿದೆ.
ಎರಡು ಬಾರಿ ಒಲಿಂಪಿಕ್ ಕಂಚಿನ ಪದಕ ವಿಜೇತ ಭಾರತ ತಂಡದ ಭಾಗವಾಗಿದ್ದ ಶ್ರೀಜೇಶ್ ಅವರಿಗೆ 2024ರ ಆಗಸ್ಟ್‌ನಲ್ಲಿ ಜೂನಿಯರ್ ತಂಡದ ಜವಾಬ್ದಾರಿ ನೀಡಲಾಗಿತ್ತು. ಅವರ ಮಾರ್ಗದರ್ಶನ ದಲ್ಲಿ ಭಾರತ ತಂಡವು ಚೆನ್ನೈನಲ್ಲಿ ನಡೆದ ಎಫ್‌ಐಎಚ್ ಪುರುಷರ ಹಾಕಿ ಜೂನಿಯರ್ ವಿಶ್ವಕಪ್‌ನಲ್ಲಿ ಕಂಚಿನ ಪದಕದ ಸಾಧನೆ ಮಾಡಿತ್ತು.
‘ಜೂನಿಯರ್ ವಿಶ್ವಕಪ್ ನಂತರ ನನ್ನ ಒಪ್ಪಂದ ಮುಗಿದಿದೆ. ಜಾಹೀರಾತು ನೋಡಿ ಕೋಚ್ ಸ್ಥಾನಕ್ಕೆ ಮತ್ತೆ ಅರ್ಜಿ ಸಲ್ಲಿಸಿದ್ದೇನೆ. ಆರರಿಂದ ಏಳು ಮಂದಿ ಅರ್ಜಿ ಸಲ್ಲಿಸಿರುವುದು ನನ್ನ ಗಮನಕ್ಕೆ ಇದೆ. ಏನಾಗುತ್ತದೆ ನೋಡೋಣ’ ಎಂದು ಶ್ರೀಜೇಶ್ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.