ಮಿಯಾಮಿ: ಭಾರತದ ಯುವ ಚೆಸ್ ಸ್ಪರ್ಧಿ ಆರ್.ಪ್ರಗ್ನಾನಂದ ಅವರು ಇಲ್ಲಿ ನಡೆಯುತ್ತಿರುವ ಎಫ್‌ಟಿಎಕ್ಸ್ ಕ್ರಿಪ್ಟೊ ಕಪ್ ಚೆಸ್ ಟೂರ್‌ನಲ್ಲಿ ಶುಭಾರಂಭ ಮಾಡಿದರು.
17 ವರ್ಷದ ಪ್ರಗ್ನಾನಂದ ಮೊದಲ ಹಣಾಹಣಿಯಲ್ಲಿ 2.5–1.5 ಪಾಯಿಂಟ್‌ಗಳಿಂದ ಜೂನಿಯರ್ ವಿಭಾಗದ ವಿಶ್ವದ ಅಗ್ರ ರ‍್ಯಾಂಕ್‌ನ ಆಟಗಾರ ಅಲಿರೆಜಾ ಫಿರೋಜಾ ವಿರುದ್ಧ ಗೆದ್ದರು.
ನಾಲ್ಕು ಸುತ್ತುಗಳ ಹಣಾಹಣಿಯ ಮೊದಲ ಹಾಗೂ ಮೂರನೇ ಸುತ್ತುಗಳಲ್ಲಿ ಪ್ರಗ್ನಾನಂದ ಗೆದ್ದರೆ, ಎರಡನೇ ಸುತ್ತಿನಲ್ಲಿ ಸೋಲು ಅನುಭವಿಸಿದರು. ನಾಲ್ಕನೇ ಸುತ್ತಿನಲ್ಲಿ ಡ್ರಾ ಸಾಧಿಸಿ ಪಂದ್ಯ ತಮ್ಮದಾಗಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.