ADVERTISEMENT

ಪ್ರಾಗ್ ಇಂಟರ್‌ನ್ಯಾಷನಲ್ ಚೆಸ್‌ ಟೂರ್ನಿ: ಗುಕೇಶ್‌ಗೆ ಇನ್ನೂ ಕೈಗೂಡದ ಗೆಲುವು

ಪಿಟಿಐ
Published 1 ಮಾರ್ಚ್ 2026, 16:10 IST
Last Updated 1 ಮಾರ್ಚ್ 2026, 16:10 IST
ಗುಕೇಶ್‌
ಗುಕೇಶ್‌   

ಪ್ರಾಗ್ (ಝೆಕ್ ರಿಪಬ್ಲಿಕ್‌): ಪ್ರಾಗ್ ಇಂಟರ್‌ನ್ಯಾಷನಲ್ ಚೆಸ್‌ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸುವ ಭಾರತದ ತಾರೆ ಡಿ.ಗುಕೇಶ್ ಅವರ ಯತ್ನ ನಾಲ್ಕನೇ ಸುತ್ತಿನಲ್ಲೂ ಕೈಗೂಡಲಿಲ್ಲ. ಅವರು ಆತಿಥೇಯ ಝೆಕ್ ಆಟಗಾರ ಡೇವಿಡ್ ನವಾರ ಜೊತೆ ಪಾಯಿಂಟ್‌ ಹಂಚಿಕೊಳ್ಳಬೇಕಾಯಿತು.

ವಿಶ್ವ ಚಾಂಪಿಯನ್ ಗುಕೇಶ್ ಈ ಟೂರ್ನಿಯಲ್ಲಿ ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡರೆ, ಒಂದರಲ್ಲಿ ಸೋಲನುಭವಿಸಿದ್ದು ಒಟ್ಟು ಒಂದೂವರೆ ಪಾಯಿಂಟ್ಸ್ ಕಲೆಹಾಕಿದ್ದಾರೆ.

ಹಾಲೆಂಡ್‌ನ ಜೋರ್ಡನ್ ವಾನ್ ಫೋರಿಸ್ಟ್‌ (3 ಪಾಯಿಂಟ್ಸ್‌) ಅವರು ಸತತ ಮೂರನೇ ಗೆಲುವು ದಾಖಲಿಸಿ, ಹತ್ತು ಆಟಗಾರರ ಕಣದಲ್ಲಿ ಅಗ್ರಸ್ಥಾನಕ್ಕೇರಿದರು. ಡಚ್‌ ಆಟಗಾರ, ಭಾನುವಾರ ನಡೆದ ಪಂದ್ಯದಲ್ಲಿ ಉಜ್ಬೇಕಿಸ್ತಾನದ ನಾದಿರ್ಬೆಕ್ ಯಾಕುಬೊಯೆವ್ (2) ಅವರನ್ನು ಸೋಲಿಸಿದರು.

ADVERTISEMENT

ಹಾಲಿ ಚಾಂಪಿಯನ್ ಅರವಿಂದ ಚಿದಂಬರಮ್ (1.5) ಅವರು ಜರ್ಮನಿಯ ವಿನ್ಸೆಂಟ್ ಕೀಮರ್ (2) ಎದುರು ಸೋಲನುಭವಿಸಿದರು.

ಚಾಲೆಂಜರ್ ವಿಭಾಗದಲ್ಲಿ ಕಣದಲ್ಲಿರುವ ಭಾರತದ ಇಬ್ಬರೂ ಡ್ರಾ ಮಾಡಿಕೊಂಡರು. ವಿಶ್ವಕಪ್ ವಿಜೇತೆ ದಿವ್ಯಾ ದೇಶಮುಖ್ (1.5) ಅವರು ಅಗ್ರಸ್ಥಾನದಲ್ಲಿರುವ ವಾಂಕ್ಲಾವ್ ಫಿನೆಕ್ (3) ಜೊತೆ ಡ್ರಾ ಮಾಡಿಕೊಂಡರೆ, ಸೂರ್ಯಶೇಖರ ಗಂಗೂಲಿ (1) ಅವರು ಆತಿಥೇಯ ದೇಶದ ಸ್ಟೀಫನ್ ಹರ್ಬೆಕ್ (2.5) ಜೊತೆ ಪಾಯಿಂಟ್ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.