ಬೆಂಗಳೂರು: ಕರ್ನಾಟಕದ ಡಿ. ಪ್ರತೀಕ್ ಅವರು ತೆಲಂಗಾಣದ ಹನುಮಕೊಂಡದಲ್ಲಿ ನಡೆಯುತ್ತಿರುವ ‘ಇಂಡಿಯಾ ಓಪನ್ 23 ವರ್ಷದೊಳಗಿನವರ ಅಥ್ಲೆಟಿಕ್ ಕೂಟ’ದ ಪುರುಷರ 200 ಮೀ. ಓಟದಲ್ಲಿ ಶನಿವಾರ ಕಂಚು ಜಯಿಸಿದರು.
ಪ್ರತೀಕ್ ಅವರು 21.30 ಸೆಕೆಂಡುಗಳಲ್ಲಿ ಗುರಿ ತಲುಪಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಒಡಿಶಾದ ದೊಂಡಪತಿ (21.10ಸೆ.) ಅವರು ಚಿನ್ನದ ಪದಕ ಗೆದ್ದರೆ, ಹರಿಯಾಣದ ರಾಜಾ ಬಾಬು (21.26ಸೆ.) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.