ADVERTISEMENT

ಪ್ರೈಮ್‌ ವಾಲಿಬಾಲ್‌: ಬೆಂಗಳೂರು ಟಾರ್ಪಿಡೋಸ್‌ಗೆ ಕೊಚ್ಚಿ ಮೊದಲ ಎದುರಾಳಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2022, 13:59 IST
Last Updated 31 ಜನವರಿ 2022, 13:59 IST
ಹೈದರಾಬಾದ್‌ನಲ್ಲಿ ಬೆಂಗಳೂರು ಟಾರ್ಪಿಡೋಸ್ ತಂಡ
ಹೈದರಾಬಾದ್‌ನಲ್ಲಿ ಬೆಂಗಳೂರು ಟಾರ್ಪಿಡೋಸ್ ತಂಡ   

ಬೆಂಗಳೂರು: ಬೆಂಗಳೂರು ಟಾರ್ಪಿಡೋಸ್ ತಂಡವು ಪ್ರೈಮ್ ವಾಲಿಬಾಲ್ ಲೀಗ್‌ನ ಮೊದಲ ಪಂದ್ಯದಲ್ಲಿ ಕೊಚ್ಚಿ ಬ್ಲೂಸ್‌ ಸ್ಪೈಕರ್ಸ್ ಸವಾಲು ಎದುರಿಸಲಿದೆ. ಫೆಬ್ರುವರಿ 8ರಂದು ಈ ಪಂದ್ಯವು ಹೈದರಾಬಾದ್‌ನ ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಫೆಬ್ರುವರಿ 5ರಿಂದ ಲೀಗ್ ನಡೆಯಲಿದೆ.

ಈ ಕುರಿತು ಸೋಮವಾರ ನಡೆದ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಟಾರ್ಪಿಡೋಸ್ ತಂಡದ ಮುಖ್ಯ ಕೋಚ್‌ ಲಕ್ಷ್ಮಿನಾರಾಯಣ್ ಅವರು ‘ಭಾರತದಲ್ಲಿ ಪ್ರತಿಭಾನ್ವಿತ ವಾಲಿಬಾಲ್ ಆಟಗಾರರಿದ್ದಾರೆ. ಪ್ರೈಮ್ ವಾಲಿಬಾಲ್ ಲೀಗ್‌ನ ಮೂಲಕ ಆಟಗಾರರು ಉತ್ತಮ ಅವಕಾಶಗಳನ್ನು ಪಡೆಯಬಹುದು‘ ಎಂದರು.

‘ಟಾರ್ಪಿಡೋಸ್ ತಂಡದಲ್ಲಿ ಹಲವು ಯುವ ಆಟಗಾರರಿದ್ದಾರೆ. ಭಾರತದ ಅನುಭವಿ ಆಟಗಾರರೊಂದಿಗೆ ಆಡುವ ಅವಕಾಶ ಗಿಟ್ಟಿಸುವ ಮೂಲಕ ಅವರು ಪ್ರಮುಖ ಆಟಗಾರರಾಗಿ ಹೊರಹೊಮ್ಮಬಹುದು. ಭಾರತ ರಾಷ್ಟ್ರೀಯ ತಂಡಕ್ಕೂ ಇದರಿಂದ ಅನುಕೂಲವಾಗಲಿದೆ‘ ಎಂದು ಅವರು ನುಡಿದರು.

ADVERTISEMENT

ದೇಶದಲ್ಲಿ ವಾಲಿಬಾಲ್‌ನ ಬೆಳವಣಿಗೆಗೂ ಪ್ರೈಮ್ ಲೀಗ್‌ ನೆರವಾಗಲಿದೆ‘ ಎಂದುಲಕ್ಷ್ಮಿನಾರಾಯಣ್ ಅಭಿಪ್ರಾಯಪಟ್ಟರು.

ಟಾರ್ಪಿಡೋಸ್ ತಂಡದ ಮಾಲೀಕತ್ವ ಗ್ರೂಪ್‌ನ ಅಂಕಿತ್ ನಾಗೋರಿ, ವಿಶಾಲ್ ಜೈಸನ್‌ ಮತ್ತು ಯಶವಂತ್ ಬಿಯ್ಯಾಲ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.