ಹೈದರಾಬಾದ್: ಗೆಲುವಿನ ಓಟ ಮುಂದುವರಿಸಿದ ಬೆಂಗಳೂರು ಟಾರ್ಪಿಡೋಸ್ ತಂಡ, ಪ್ರೈಮ್ ವಾಲಿಬಾಲ್ ಲೀಗ್ ಪಂದ್ಯದಲ್ಲಿ ಶನಿವಾರ ಕೊಚ್ಚಿ ಬ್ಲೂ ಸ್ಪೈಕರ್ಸ್ ತಂಡವನ್ನು 13–15, 17–15, 15–9, 15-12 ರಿಂದ ಸೋಲಿಸಿತು. ಇದು ಟಾರ್ಪಿಡೋಸ್‌ಗೆ ಸತತ ಮೂರನೇ ಗೆಲುವು.
ಸೇತು ಅವರ ಸೂಪರ್ ಸರ್ವ್‌ಗಳು, ನಾಯಕ ಮತ್ತು ಸೆಟ್ಟರ್ ಮ್ಯಾಥ್ಯೂ ವೆಸ್ಟ್ ಅವರ ಸಮಯೋಚಿತ ಆಟ, ಜೋಯೆಲ್ ಬೆಂಜಮಿನ್ ಹೊಡೆತಗಳು ಬೆಂಗಳೂರಿನ ತಂಡ ಮೇಲುಗೈ ಪಡೆಯಲು ನೆರವಾದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.