ADVERTISEMENT

ಕಿಕ್ ಬಾಕ್ಸಿಂಗ್‌: ಪ್ರಿಯಾಂಕಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 18:29 IST
Last Updated 1 ಡಿಸೆಂಬರ್ 2021, 18:29 IST
ಪ್ರಿಯಾಂಕ ರೆಡ್ಡಿ
ಪ್ರಿಯಾಂಕ ರೆಡ್ಡಿ   

ಬೆಂಗಳೂರು: ನಗರದ ಸಿಎಂಆರ್‌ಐಟಿಯ ವಿದ್ಯಾರ್ಥಿನಿ ಎಲ್.ಪ್ರಿಯಾಂಕ ರೆಡ್ಡಿ ಅವರು ಚೆನ್ನೈನಲ್ಲಿ ನಡೆದ ಫೈಟ್‌ ಲೀಗ್ ಚಾಂಪಿಯನ್‌ಷಿಪ್‌ನ ಕಿಕ್ ಬಾಕ್ಸಿಂಗ್‌ನಲ್ಲಿ ಚಿನ್ನ ಮತ್ತು ಟೈಟಲ್‌ ಬೆಲ್ಟ್‌ ತಮ್ಮದಾಗಿಸಿಕೊಂಡಿದ್ದಾರೆ.

ಭಾರತ ಮುಯ್‌ಥಾಯ್ ಸಂಸ್ಥೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಪ್ರಿಯಾಂಕ, ಚೆನ್ನೈನ ಎದುರಾಳಿಯನ್ನು ಎಲ್ಲ ಸುತ್ತುಗಳಲ್ಲೂ ಮಣಿಸಿದರು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT