ADVERTISEMENT

ಪ್ರೊ ಕಬಡ್ಡಿ ಲೀಗ್‌ | ಡೆಲ್ಲಿ ಗೆಲುವಿನಲ್ಲಿ ಮಿಂಚಿದ ಆಶು ಮಲಿಕ್

ಪ್ರೊ ಕಬಡ್ಡಿ ಲೀಗ್‌

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 1:19 IST
Last Updated 4 ಅಕ್ಟೋಬರ್ 2025, 1:19 IST
ದಬಾಂಗ್ ಡೆಲ್ಲಿ ತಂಡದ ರೇಡರ್‌ನನ್ನು ಹಿಡಿಯಲು ಯುಪಿ ಯೋಧಾಸ್‌ ಆಟಗಾರರು ವ್ಯೂಹ ರಚಿಸಿದ್ದು ಹೀಗೆ...
ದಬಾಂಗ್ ಡೆಲ್ಲಿ ತಂಡದ ರೇಡರ್‌ನನ್ನು ಹಿಡಿಯಲು ಯುಪಿ ಯೋಧಾಸ್‌ ಆಟಗಾರರು ವ್ಯೂಹ ರಚಿಸಿದ್ದು ಹೀಗೆ...   

ಚೆನ್ನೈ (ಪಿಟಿಐ): ನಾಯಕ ಆಶು ಮಲಿಕ್ ಗಳಿಸಿದ 14 ಪಾಯಿಂಟ್‌ಗಳ ನೆರವಿನಿಂದ ದಬಾಂಗ್‌ ಡೆಲ್ಲಿ ತಂಡ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಶುಕ್ರವಾರ 43–26 ರಿಂದ ಯುಪಿ ಯೋಧಾಸ್ ತಂಡವನ್ನು ಸೋಲಿಸಿತು. 10 ಪಂದ್ಯಗಳಲ್ಲಿ ಒಂಬತ್ತನೇ ಜಯ ಆಚರಿಸುವ ಮೂಲಕ ಡೆಲ್ಲಿ ತಂಡ ಅಗ್ರಸ್ಥಾನವನ್ನು ಕಾಪಾಡಿಕೊಂಡಿದೆ.

ಅಜಿಂಕ್ಯ ಪವಾರ್ ಮತ್ತು ಫಜಲ್ ಅತ್ರಾಚಲಿ ತಲಾ ನಾಲ್ಕು ಪಾಯಿಂಟ್ಸ್ ಗಳಿಸಿ ಗೆಲುವಿಗೆ ಸಹಕರಿಸಿದರು. ಯೋಧಾಸ್ ಪರ ಕನ್ನಡಿಗ ಗಗನ್‌ ಗೌಡ 12 ಪಾಯಿಂಟ್ಸ್‌ ಗಳಿಸಿದರು. ಆದರೆ ಇತರ ರೇಡರ್‌ಗಳಿಂದ ಬೆಂಬಲ ದೊರೆಯಲಿಲ್ಲ.

ದಿನದ ಎರಡನೇ ಪಂದ್ಯದಲ್ಲಿ ತಮಿಳ್ ತಲೈವಾಸ್‌ 45–33 ರಿಂದ ಹರಿಯಾಣ ಸ್ಟೀಲರ್ಸ್ ತಂಡದ ಮೇಲೆ ಗೆಲುವು ಪಡೆಯಿತು. ತಲೈವಾಸ್ ನಾಯಕ, ರೇಡರ್‌ ಅರ್ಜುನ್ ದೇಶ್ವಾಲ್‌ 21 ಟಚ್‌ ಪಾಯಿಂಟ್ಸ್‌ ಸೇರಿ 22 ಪಾಯಿಂಟ್ಸ್ ಕಲೆಹಾಕಿ ಗೆಲುವಿನಲ್ಲಿ ಮಿಂಚಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.