ADVERTISEMENT

ಪ್ರೊ ಕಬಡ್ಡಿ: ಹರಿಯಾಣ ಸ್ಟೀಲರ್ಸ್‌ಗೆ ರೋಚಕ ಜಯ

ಪಿಟಿಐ
Published 5 ಡಿಸೆಂಬರ್ 2018, 17:37 IST
Last Updated 5 ಡಿಸೆಂಬರ್ 2018, 17:37 IST
ಹರಿಯಾಣ ಸ್ಟೀಲರ್ಸ್‌ ಮತ್ತು ಬೆಂಗಾಲ್‌ ವಾರಿಯರ್ಸ್‌ ತಂಡಗಳ ನಡುವಿನ ರೋಚನಕ ಹಣಾಹಣಿ
ಹರಿಯಾಣ ಸ್ಟೀಲರ್ಸ್‌ ಮತ್ತು ಬೆಂಗಾಲ್‌ ವಾರಿಯರ್ಸ್‌ ತಂಡಗಳ ನಡುವಿನ ರೋಚನಕ ಹಣಾಹಣಿ   

ನವದೆಹಲಿ: ತ್ಯಾಗರಾಜ ಕ್ರೀಡಾ ಸಂಕೀರ್ಣದಲ್ಲಿ ಬುಧವಾರ ಸೇರಿದ್ದ ಕ್ರೀಡಾಪ್ರೇಮಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದ ರೋಚಕ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್‌ ಜಯಭೇರಿ ಬಾರಿಸಿತು.

ಮೋನು ಗೋಯತ್ ಅವರ ಮಿಂಚಿನ ದಾಳಿಯ ಬಲದಿಂದ ಹರಿಯಾಣ ತಂಡವು 35–33ರಿಂದ ಬೆಂಗಾಲ್ ವಾರಿಯರ್ಸ್‌ ವಿರುದ್ಧ ಗೆದ್ದಿತು.

ಮೋನು ಅವರು ರೇಡಿಂಗ್‌ನಲ್ಲಿ ಒಟ್ಟು 12 ಪಾಯಿಂಟ್ಸ್‌ ಹೆಕ್ಕಿ ತಂದರು. ವಿಕಾಸ್ ಖಂಡೋಲಾ ಕೂಡ ಐದು ಅಂಕಗಳನ್ನು ತಂಡದ ಖಾತೆಗೆ ಕಾಣಿಕೆ ನೀಡಿದರು.ಸುನಿಲ್ ಟ್ಯಾಕಲ್‌ನಲ್ಲಿ ಮಿಂಚಿದರು. ಮೂರು ಪಾಯಿಂಟ್‌ಗಳ ಕಾಣಿಕೆ ನೀಡಿದರು.

ADVERTISEMENT

ಆದರೆ ನಿಕಟ ಪೈಪೋಟಿ ನೀಡಿದ್ದ ಬೆಂಗಾಲ್ ಕೂಡ ಕೊನೆಯ ಕ್ಷಣದವರೆಗೂ ಪಟ್ಟು ಸಡಿಲಿಸಲಿಲ್ಲ. ತಂಡದ ಮಣಿಂದರ್ ಸಿಂಗ್ ರೇಡಿಂಗ್‌ನಲ್ಲಿ 11 ಮತ್ತು ರವೀಂದ್ರ ಕುಮಾವತ್ ಏಳು ಪಾಯಿಂಟ್ಸ್‌ ತಂದಿತ್ತರು. ಆಲ್‌ರೌಂಡ್ ಆಟ
ವಾಟಿದ ಮಹೇಶ್ ಗೌಡ ರೇಡಿಂಗ್‌ನಲ್ಲಿ ಎರಡು, ಟ್ಯಾಕಲ್‌ನಲ್ಲಿ ಎರಡು, ಬೋನಸ್‌ನಲ್ಲಿ ಒಂದು ಪಾಯಿಂಟ್‌ ಸಂಗ್ರಹಿಸಿದರು.

ಸ್ಟೀಲರ್ಸ್‌ ಮತ್ತು ಯೋಧಾ ತಂಡಗಳ ಹಣಾಹಣಿ: ಇಂದು ನಡೆಯುವ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್‌ ತಂಡವು ಯು.ಪಿ.ಯೋಧಾ ವನ್ನು ಎದುರಿಸಲಿದೆ. ಹಾಗೆಯೇ ದಬಂಗ್‌ ಡೆಲ್ಲಿ ಹಾಗೂ ತಮಿಳ್‌ ತಲೈವಾಸ್‌ ತಂಡಗಳ ನಡುವೆ ಸೆಣೆಸಾಟ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.