ADVERTISEMENT

ಪ್ರೊ ಕಬಡ್ಡಿ: ಪ್ರದೀಪ್‌ ಪ್ರಹಾರ; ಬೆಂಗಾಲ್‌ ತತ್ತರ

ಪಟ್ನಾಗೆ ಭರ್ಜರಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2019, 17:06 IST
Last Updated 6 ಅಕ್ಟೋಬರ್ 2019, 17:06 IST
ಬೆಂಗಾಲ್‌ ವಾರಿಯರ್ಸ್ ಆವರಣದಲ್ಲಿ ಪಾಯಿಂಟ್ಸ್ ಗಳಿಸಲು ಯತ್ನಿಸಿದ ಪ್ರದೀಪ್‌ ನರ್ವಾಲ್‌
ಬೆಂಗಾಲ್‌ ವಾರಿಯರ್ಸ್ ಆವರಣದಲ್ಲಿ ಪಾಯಿಂಟ್ಸ್ ಗಳಿಸಲು ಯತ್ನಿಸಿದ ಪ್ರದೀಪ್‌ ನರ್ವಾಲ್‌   

ಗ್ರೇಟರ್‌ ನೊಯ್ಡಾ: ಪ್ರದೀಪ್‌ ನರ್ವಾಲ್‌ ಗಳಿಸಿದ ಅಮೋಘ 36 ಪಾಯಿಂಟ್ಸ್ ಬಲದಿಂದ ಪಟ್ನಾ ಪೈರೇಟ್ಸ್ ತಂಡ ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ಸ್ ತಂಡವನ್ನು 69–41ರಿಂದ ಮಣಿಸಿತು.

ಇಲ್ಲಿಯ ಶಹೀದ್‌ ವಿಜಯ್‌ ಸಿಂಗ್‌ ಪಾಟಿಕ್‌ ಕ್ರೀಡಾಂಗಣದಲ್ಲಿ ಪ್ರದೀಪ್‌ ಸಂಪೂರ್ಣ ಪ್ರಾಬಲ್ಯ ಮೆರೆದರು. ಸೌರಭ್‌ ಪಾಟೀಲ್‌ ರೇಡಿಂಗ್‌ ಮೂಲಕ ಬೆಂಗಾಲ್‌ ತಂಡ ಪಂದ್ಯದಲ್ಲಿ ಮೊದಲ ಪಾಯಿಂಟ್‌ ಗಳಿಸಿತು. 8ನೇ ನಿಮಿಷದಲ್ಲಿ ಆ ತಂಡ 9–8ರಲ್ಲಿ ಮುನ್ನಡೆಯಲ್ಲಿತ್ತು. 10ನೇ ನಿಮಿಷದಲ್ಲಿ 11–9ರಿಂದ ಮುನ್ನಡೆ ಗಳಿಸಿದ ಪಟ್ನಾ ಆ ಬಳಿಕ ಹಿಂದುಳಿಯಲೇ ಇಲ್ಲ. ಮೊದಲಾರ್ಧಕ್ಕೆ 7 ನಿಮಿಷ ಉಳಿದಿರುವಾಗ ಬೆಂಗಾಲ್‌ ತಂಡ ಆಲ್‌ ಔಟ್‌ ಆಯಿತು. ಪಟ್ನಾ 18–9 ಮುನ್ನಡೆ ಸಾಧಿಸಿತು. ಮೊದಲಾರ್ಧ ಮುಕ್ತಾಯಕ್ಕೆ ಆ ತಂಡ 27–17ರ ಮುನ್ನಡೆ ಕಾಯ್ದುಕೊಂಡಿತು. ಪ್ರದೀಪ್‌ ನರ್ವಾಲ್‌ ಈ ಋತುವಿನಲ್ಲಿ 15 ಸೂಪರ್‌ ಟೆನ್‌ ಸಾಧನೆ ಮಾಡಿದರು.

ದ್ವಿತೀಯಾರ್ಧದಲ್ಲಿ ಪಟ್ನಾ ಇನ್ನಷ್ಟು ಪರಿಣಾಮಕಾರಿ ಆಟವಾಡಿತು. ಪಂದ್ಯ ಮುಕ್ತಾಯಕ್ಕೆ ಮೂರು ನಿಮಿಷ ಉಳಿದಿರುವಾಗ ಪ್ರದೀಪ್‌ ಮೋಡಿ ಮಾಡಿದರು. ರೇಡಿಂಗ್‌ನಲ್ಲಿ ಆರು ಆಟಗಾರರನ್ನು ಔಟ್‌ ಮಾಡಿದರು. ಬೆಂಗಾಲ್ ಚೇತರಿಸಿಕೊಳ್ಳಲೇ ಇಲ್ಲ. ಆ ತಂಡದ ಪರ ಸೌರಭ್‌ ಪಾಟೀಲ್‌ 11 ಹಾಗೂ ರಾಕೇಶ್‌ ನರ್ವಾಲ್‌ 10 ಪಾಯಿಂಟ್‌ ಗಳಿಸಿ ಮಿಂಚಿದರು.

ADVERTISEMENT

ಯುಪಿ ಯೋಧಾಗೆ ಜಯ: ಮತ್ತೊಂದು ಪಂದ್ಯದಲ್ಲಿ ಯುಪಿ ಯೋಧಾ ತಂಡ ಪುಣೇರಿ ಪಲ್ಟನ್‌ ಎದುರು 43–39ಅಂತರದಿಂದ ಗೆಲುವು ಸಾಧಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.