ಪ್ರೊ ಕಬಡ್ಡಿ ಲೀಗ್
ನವದೆಹಲಿ: ರೇಡರ್ ಅಲಿರೆಜಾ ಮಿರ್ಜೈಯನ್ ಅವರ ‘ಸೂಪರ್ ಟೆನ್’ ಸಾಹಸದ ನೆರವಿನಿಂದ ಬೆಂಗಳೂರು ಬುಲ್ಸ್ ತಂಡವು ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಶನಿವಾರ 33–23ರಿಂದ ಪ್ರಬಲ ದಬಂಗ್ ಡೆಲ್ಲಿ ತಂಡವನ್ನು ಮಣಿಸಿತು.
16 ಪಂದ್ಯಗಳಲ್ಲಿ ಒಂಬತ್ತನೇ ಗೆಲುವು ಸಾಧಿಸಿದ ಬುಲ್ಸ್ ತಂಡವು 18 ಅಂಕ ಗಳೊಂದಿಗೆ ಲೀಗ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿತು. ದಬಂಗ್ ತಂಡಕ್ಕೆ 17 ಪಂದ್ಯ ಗಳಲ್ಲಿ ಇದು ನಾಲ್ಕನೇ ಸೋಲು. 26 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ದಿನದ ಮತ್ತೊಂದು ಪಂದ್ಯದಲ್ಲಿ ಭರತ್ ಮತ್ತು ವಿಜಯ್ ಮಲಿಕ್ ಅವರ ಸೂಪರ್ ಟೆನ್ ನೆರವಿನಿಂದ ತೆಲುಗು ಟೈಟನ್ಸ್ ತಂಡವು 40–31ರಿಂದ ಪುಣೇರಿ ಪಲ್ಟನ್ ತಂಡವನ್ನು ಮಣಿಸಿತು. ಇನ್ನೊಂದು ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು 38–30ರಿಂದ ಬೆಂಗಾಲ್ ವಾರಿಯರ್ಸ್ ಎದುರು ಜಯ ಸಾಧಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.