
ನವದೆಹಲಿ: ಪ್ರೊ ಕಬಡ್ಡಿ ಲೀಗ್‌ನ ಹಾಲಿ ಆವೃತ್ತಿಯ ಪ್ಲೇ ಆಫ್ ಮತ್ತು ಫೈನಲ್ ಪಂದ್ಯಗಳು ನವದೆಹಲಿಯ ತ್ಯಾಗರಾಜ್ ಕ್ರೀಡಾಂಗಣದಲ್ಲಿ ನಡೆಯಲಿವೆ.
12ನೇ ಆವೃತ್ತಿಯಲ್ಲಿ ‘ದೆಹಲಿ ಲೆಗ್’ನ ಪಂದ್ಯಗಳು ಶನಿವಾರ ಆರಂಭವಾಗಲಿದೆ. ಇದೇ 23ರವರೆಗೆ ಲೀಗ್ ಹಂತದ ಪಂದ್ಯಗಳು ನಡೆಯಲಿವೆ. 25ರಿಂದ ಪ್ಲೇ ಇನ್ ಮತ್ತು ಪ್ಲೇ ಆಫ್ ಹಂತದ ಸೆಣಸಾಟ ನಡೆಯಲಿವೆ.
ಆತಿಥೇಯ ತಂಡವಾದ ದಬಂಗ್ ಡೆಲ್ಲಿ ಕೆ.ಸಿ ತಂಡವು ಲೀಗ್ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಈಗಾಗಲೇ ಪ್ಲೇ ಆಫ್‌ಗೆ ಸ್ಥಾನವನ್ನು ಕಾಯ್ದಿರಿಸಿದೆ. ಉಳಿದ ಏಳು ಸ್ಥಾನಗಳಿಗೆ ಇತರ ತಂಡಗಳಿಂದ ತೀವ್ರ ಪೈಪೋಟಿಯಿದೆ.
ಲೀಗ್ ಪಟ್ಟಿಯಲ್ಲಿ ಐದರಿಂದ ಎಂಟನೇ ಸ್ಥಾನ ಪಡೆದ ತಂಡಗಳು ಪ್ಲೇ ಇನ್ ಹಂತದಲ್ಲಿ ಪೈಪೋಟಿ ನಡೆಸಿ ಗೆದ್ದ ಎರಡು ತಂಡಗಳು ಪ್ಲೇಆಫ್‌ಗೆ ಅರ್ಹತೆ ಪಡೆಯಲಿವೆ. ಇದೇ 26ರಿಂದ 29ರವರೆಗೆ ಪ್ಲೇ ಆಫ್ ಪಂದ್ಯಗಳು ನಡೆಯಲಿವೆ. 31ರಂದು ಪ್ರಶಸ್ತಿ ಸುತ್ತಿನ ಪಂದ್ಯ ಆಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.