ADVERTISEMENT

ಪ್ರೊ ಕಬಡ್ಡಿ ಲೀಗ್‌: ಹಿಮಾಂಶು ಮಿಂಚು; ಜೈಂಟ್ಸ್‌ಗೆ ಜಯ

ಪಿಟಿಐ
Published 14 ಅಕ್ಟೋಬರ್ 2025, 16:32 IST
Last Updated 14 ಅಕ್ಟೋಬರ್ 2025, 16:32 IST
<div class="paragraphs"><p>ಪ್ರೊ ಕಬಡ್ಡಿ ಲೀಗ್‌</p></div>

ಪ್ರೊ ಕಬಡ್ಡಿ ಲೀಗ್‌

   

ದೆಹಲಿ: ಹಿಮಾಂಶು ಅವರ ಅಮೋಘ ರೇಡಿಂಗ್‌ ಬಲದಿಂದ ಗುಜರಾತ್‌ ಜೈಂಟ್ಸ್‌ ತಂಡವು ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಮಂಗಳವಾರ 40–32ರಿಂದ ಪಟ್ನಾ ಪೈರೇಟ್ಸ್‌ ತಂಡವನ್ನು ಮಣಿಸಿತು.

ಇಲ್ಲಿನ ತ್ಯಾಜರಾಜ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ನಲ್ಲಿ ನಡೆದ ಪಂದ್ಯದ ಮೊದಲಾರ್ಧದಲ್ಲಿ ಜೈಂಟ್ಸ್‌ ತಂಡವು 23–17ರಿಂದ ಮುನ್ನಡೆ ಸಾಧಿಸಿತ್ತು. ದ್ವಿತೀಯಾರ್ಧದಲ್ಲೂ ಗುಜರಾತ್‌ ಆಟಗಾರರು ಪಾರಮ್ಯವನ್ನು ಮುಂದುವರಿಸಿದರು.

ADVERTISEMENT

ಗುಜರಾತ್‌ ತಂಡಕ್ಕೆ 14 ಪಂದ್ಯಗಳಲ್ಲಿ ಇದು ಐದನೇ ಗೆಲುವಾಗಿದೆ. ಪಟ್ನಾ ತಂಡಕ್ಕೆ 13 ಪಂದ್ಯಗಳಲ್ಲಿ ಇದು 10ನೇ ಸೋಲಾಗಿದೆ. ಲೀಗ್‌ ಪಟ್ಟಿಯಲ್ಲಿ ಗುಜರಾತ್‌ (10 ಅಂಕ) 10ನೇ ಸ್ಥಾನದಲ್ಲಿದ್ದರೆ, ಪಟ್ನಾ (6 ಅಂಕ) 12ನೇ ಸ್ಥಾನದಲ್ಲಿದೆ. 

ಜೈಂಟ್ಸ್‌ ಪರ ಹಿಮಾಂಶು 11 ಅಂಕ ಗಳಿಸಿದರೆ, ಆಲ್‌ರೌಂಡರ್‌ ಮೊಹಮ್ಮದ್‌ ರೆಜಾ ಶಾಡ್ಲೊಯಿ 8 ಪಾಯಿಂಟ್ಸ್‌ ಗಳಿಸಿದರು. ಪಟ್ನಾ ಪರ ಮನ್‌ದೀಪ್‌ ಕುಮಾರ್‌ (12 ಅಂಕ) ಏಕಾಂಕಿ ಹೋರಾಟ ನಡೆಸಿದರು.

ಯೋಧಾಸ್‌ಗೆ ಗೆಲುವು: ರೋಚಕವಾಗಿದ್ದ ದಿನದ ಮತ್ತೊಂದು ಪಂದ್ಯದಲ್ಲಿ ಗುಮನ್‌ ಸಿಂಗ್‌ (8) ಮತ್ತು ಹಿತೇಶ್‌ (7) ಅವರ ಆಟದ ಬಲದಿಂದ ಯು.ಪಿ ಯೋಧಾಸ್‌ ತಂಡ 32–31ರಿಂದ ತಮಿಳು ತಲೈವಾಸ್ ತಂಡವನ್ನು ಮಣಿಸಿತು. ಪಂದ್ಯದ ಮೊದ
ಲಾರ್ಧದಲ್ಲಿ ತಲೈವಾಸ್‌ ತಂಡ 17–14ರಿಂದ ಮುನ್ನಡೆಯಲ್ಲಿತ್ತು. ದ್ವಿತೀಯಾರ್ಧದಲ್ಲಿ ಯೋಧಾಸ್‌ ಪಾರಮ್ಯ ಮೆರೆಯಿತು.

ಇಂದಿನ ಪಂದ್ಯಗಳು

ತೆಲುಗು ಟೈಟನ್ಸ್‌–ಬೆಂಗಾಲ್‌ ವಾರಿಯರ್ಸ್‌ (ರಾತ್ರಿ 8)

ಜೈಪುರ ಪಿಂಕ್‌ ಪ್ಯಾಂಥರ್ಸ್‌– ಪುಣೇರಿ ಪಲ್ಟನ್‌ (ರಾತ್ರಿ 9)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.