ವಿಶಾಖಪಟ್ಟಣ: ಅರ್ಜುನ್ ದೇಸ್ವಾಲ್ ಮತ್ತು ಪವನ್ ಶೆರಾವತ್ ಅವರ ಚುರುಕಾದ ದಾಳಿಯ ಬಲದಿಂದ ತಮಿಳ್ ತಲೈವಾಸ್ ತಂಡವು ಶುಕ್ರವಾರ ಆರಂಭವಾದ ಪ್ರೊ ಕಬಡ್ಡಿ ಟೂರ್ನಿಯ ಉದ್ಘಾಟನೆ ಪಂದ್ಯದಲ್ಲಿ ರೋಚಕ ಜಯ ಸಾಧಿಸಿತು. ಆತಿಥೇಯ ತೆಲುಗು ಟೈಟನ್ಸ್ ಸೋಲಿನ ಕಹಿಯುಂಡಿತು.
ವಿಶ್ವನಾಥ್ ಸ್ಪೋರ್ಟ್ಸ್ ಕ್ಲಬ್ ಒಳಾಂಗಣದಲ್ಲಿ ನಡೆದ ಪಂದ್ಯದಲ್ಲಿ; ತಮಿಳ್ ತಲೈವಾಸ್ ತಂಡವು 38–35ರಿಂದ ತೆಲುಗು ಟೈಟನ್ಸ್ ವಿರುದ್ಧ ಜಯಭೇರಿ ಬಾರಿಸಿತು.
ತಮಿಳ್ ತಲೈವಾಸ್ ತಂಡದ ರೇಡರ್ ಅರ್ಜುನ್ ದೇಸ್ವಾಲ್ ಅವರು 12 ಅಂಕಗಳನ್ನು ತಮ್ಮ ತಂಡದ ಖಾತೆಗೆ ತಂದುಕೊಟ್ಟರು. ಸ್ಟಾರ್ ಆಟಗಾರ, ನಾಯಕ ಪವನ್ ಶೇರಾವತ್ ಕೂಡ 9 ಅಂಕಗಳನ್ನು ಗಳಿಸಿ ತಂಡದ ಬಲ ಹೆಚ್ಚಿಸಿದರು.
ತೆಲುಗು ಆಟಗಾರರೂ ತಮ್ಮ ಪೂರ್ಣ ಸಾಮರ್ಥ್ಯ ಪಣಕ್ಕೊಡ್ಡಿದರು. ನಾಯಕ, ಆಲ್‌ರೌಂಡರ್ ವಿಜಯ್ ಮಲಿಕ್ ಅವರು 6 ಹಾಗೂ ಭರತ್ ಅವರು 11 ಅಂಕಗಳನ್ನು ಗಳಿಸಿದರು. ಆದರೆ ಕೊನೆಯ ಕ್ಷಣದಲ್ಲಿ ಚುರುಕಾದ ದಾಳಿ ನಡೆಸಿದ ತಮಿಳ್ ಆಟಗಾರರು ಗೆಲುವಿನ ಗಡಿ ದಾಟಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.