ADVERTISEMENT

Pro Kabaddi: ಟೈಟನ್ಸ್‌ಗೆ ಮಣಿದ ಯೋಧಾಸ್‌

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 0:07 IST
Last Updated 6 ಅಕ್ಟೋಬರ್ 2025, 0:07 IST
<div class="paragraphs"><p>ಪ್ರೊ ಕಬಡ್ಡಿ ಲೀಗ್‌</p></div>

ಪ್ರೊ ಕಬಡ್ಡಿ ಲೀಗ್‌

   

ಚೆನ್ನೈ: ಉತ್ತಮ ಹೋರಾಟ ಕಂಡ ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಆಲ್‌ರೌಂಡರ್‌ ಅಲಿರೇಜಾ ಮಿರ್‌ಝೈನ್ ಅವರ ಸೂಪರ್ ಟೆನ್‌ ನೆರವಿನಿಂದ ಬೆಂಗಳೂರು ಬುಲ್ಸ್ ತಂಡ 33–29 ಪಾಯಿಂಟ್‌ಗಳಿಂದ ತಮಿಳ್ ತಲೈವಾಸ್ ತಂಡವನ್ನು ಸೋಲಿಸಿತು. ಬುಲ್ಸ್‌ಗೆ ಇದು 12 ಪಂದ್ಯಗಳಲ್ಲಿ ಆರನೇ ಜಯ.

ಅಲಿರೇಜಾ (10 ಪಾಯಿಂಟ್‌) ರೇಡಿಂಗ್‌ನಲ್ಲಿ ಮಿಂಚಿದರೆ, ರಕ್ಷಣೆಯಲ್ಲಿ ಸಂಜಯ್ ಧುಲ್ (5) ಮತ್ತು ದೀಪಕ್‌ ಸರ್ಕಾರ್‌ (4) ಅವರು ಉಪಯುಕ್ತ ಪಾಯಿಂಟ್ಸ್‌ ತಂದುಕೊಟ್ಟರು. ತಲೈವಾಸ್‌ ಪರ ನಾಯಕ ಅರ್ಜುನ್‌ ದೇಶ್ವಾಲ್‌ 9 ಪಾಯಿಂಟ್ಸ್ ಗಳಿಸಿದರು. ರೋಹಿತ್‌ ಗೋಪಾಲ್‌ಲಾಲ್‌ ಬೇನಿವಾಲ್ 6 ಪಾಯಿಂಟ್‌ ಗಳಿಸಿದರು.

ADVERTISEMENT

ಮೊದಲಾರ್ಧದಲ್ಲಿ ಲೀಡ್‌ ಬದಲಾಗುತ್ತ ಹೋಯಿತು. 6–2 ಮುನ್ನಡೆಯಲ್ಲಿದ್ದ ಬುಲ್ಸ್‌, ನಂತರ 6–8 ಹಿನ್ನಡೆ ಕಂಡಿತು. ಮತ್ತೆ ಲೀಡ್‌ ಎರಡು ಸಲ ಬದಲಾಗಿ ವಿರಾಮದ ವೇಳೆ 18–17 ಪಾಯಿಂಟ್‌ಗಳಿಂದ ತಲೈವಾಸ್‌ ಒಂದು ಪಾಯಿಂಟ್‌ ಮುನ್ನಡೆ ಪಡೆದಿತ್ತು.

ತಲೈವಾಸ್‌ 12 ಪಂದ್ಯಗಳಲ್ಲಿ ಏಳು ಸೋತಿದ್ದು, 10 ಪಾಯಿಂಟ್ಸ್ ಗಳಿಸಿ ಏಳನೇ ಸ್ಥಾನದಲ್ಲಿದೆ. ಬುಲ್ಸ್ (12 ಪಾಯಿಂಟ್ಸ್‌) ಐದನೇ ಸ್ಥಾನದಲ್ಲಿದೆ.

ಟೈಟನ್ಸ್‌ಗೆ ಜಯ:

ಇದಕ್ಕೆ ಮೊದಲು ತೆಲುಗು ಟೈಟನ್ಸ್ ತಂಡ 40–35 ಪಾಯಿಂಟ್‌ಗಳಿಂದ ಯುಪಿ ಯೋಧಾಸ್ ತಂಡವನ್ನು ಸೋಲಿಸಿತು. ಭರತ್‌ (14), ವಿಜಯ್ ಮಲಿಕ್‌ (9), ಶುಭಂ ಶಿಂದೆ (5) ಅವರು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಯೋಧಾಸ್‌ ಪರ ಭವಾನಿ ರಜಪೂತ್ (16) ಮತ್ತು ಗುಮನ್ ಸಿಂಗ್ (8) ಬಿಟ್ಟರೆ ಉಳಿದವರಿಂದ ಉತ್ತಮ ಪ್ರದರ್ಶನ ಬರಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.