ADVERTISEMENT

ಪ್ರೊ. ಕಬಡ್ಡಿ: ತಲೈವಾಸ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 18:34 IST
Last Updated 6 ಫೆಬ್ರುವರಿ 2024, 18:34 IST
<div class="paragraphs"><p>ಪ್ರೊ ಕಬಡ್ಡಿ</p></div>

ಪ್ರೊ ಕಬಡ್ಡಿ

   

ನವದೆಹಲಿ: ಅನುಭವಿ ರೈಡರ್‌ ನರೇಂದ್ರ ಹೋಶಿಯಾರ್ ಅವರ ಅಮೋಘ ಆಟದಿಂದಾಗಿ  ತಮಿಳ್ ತಲೈವಾಸ್ ತಂಡವು ಪ್ರೊ ಕಬಡ್ಡಿ ಲೀಗ್‌ನಲ್ಲಿ ಮಂಗಳವಾರ 32–25ರಿಂದ ಯು.ಪಿ.ಯೋಧಾಸ್‌ ತಂಡವನ್ನು ಸೋಲಿಸಿತು.

ಇಲ್ಲಿನ ತ್ಯಾಗರಾಜ ಕ್ರೀಡಾ ಸಂಕೀರ್ಣದಲ್ಲಿ ನಡೆದ ‍‍ಪಂದ್ಯದಲ್ಲಿ ವಿರಾಮದ ವೇಳೆಗೆ 21–16 ಪಾಯಿಂಟ್‌ಗಳಿಂದ ಮುಂದಿದ್ದ ತಲೈವಾಸ್ ತಂಡದ ಪರ ದಾಳಿಯಲ್ಲಿ ನರೇಂದ್ರ ಯೋಶಿಯಾರ್ (10) ಮತ್ತು ಸಾಹಿಲ್ ಸಿಂಗ್ (6) ಪಾಯಿಂಟ್ಸ್ ಪಡೆದು ಮಿಂಚಿದರು. ಈ ಗೆಲುವಿನೊಂದಿಗೆ ತಲೈವಾಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. 

ADVERTISEMENT

ಯೋಧಾಸ್ ಪರ ಗಗನ್ ಗೌಡ (6) ಮತ್ತು ಮಹಿಪಾಲ್ (4) ಪಾಯಿಂಟ್ಸ್ ಗಳಿಸಲಷ್ಟೇ ಶಕ್ತರಾದರು. ಇತರೆ ಆಟಗಾರರಿಂದ ಉತ್ತಮ ಬೆಂಬಲ ಸಿಗಲಿಲ್ಲ. ಈ ಸೋಲಿನೊಂದಿಗೆ ಯೋಧಾಸ್ ತಂಡ 11ನೇ ಸ್ಥಾನದಲ್ಲಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.