ADVERTISEMENT

ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಬ್ಯಾಡ್ಮಿಂಟನ್‌ ತಾರೆ ಪಿ.ವಿ. ಸಿಂಧು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಡಿಸೆಂಬರ್ 2025, 7:11 IST
Last Updated 22 ಡಿಸೆಂಬರ್ 2025, 7:11 IST
   

ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು ಅವರು ಮೊದಲ ವಿವಾಹ ವಾರ್ಷಿಕೋತ್ಸವ ಸಂಭ್ರಮದ ಕ್ಷಣಗಳನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಈ ಕುರಿತು ಪಿ.ವಿ. ಸಿಂಧು ಅವರು, ‘ಪ್ರೀತಿ ಎಂದರೆ ದೊಡ್ಡ ದೊಡ್ಡ ಕ್ಷಣಗಳಲ್ಲಿ ಮಾತ್ರ ಜೊತೆಗಿರುವುದಲ್ಲ. ಬದುಕಿನ ಪ್ರತಿ ಕ್ಷಣದಲ್ಲೂ ಪ್ರೀತಿಯನ್ನು ಕಂಡಿದ್ದೇನೆ. ನಿಧಾನವಾಗಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳವುದರಲ್ಲಿ, ಲೆಕ್ಕ ಹಾಕದೆ ಒಟ್ಟಿಗೆ ಬಾಳುವುದರಲ್ಲಿ, ಕಷ್ಟ ದಿನಗಳಲ್ಲಿ ಜೊತೆಯಾಗಿ ಇರುವುದು ಹೇಗೆ ಎಂಬುದನ್ನು ಈ ಮೊದಲ ವರ್ಷ ಅರ್ಥವಾಯಿತು’.

ಕಷ್ಟದಲ್ಲಿ ಜೊತೆಯಾಗಿ ನಿಲ್ಲುವುದು, ಬೆಂಬಲ ನೀಡುವುದು, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಗುಣಗಳ ಬಗ್ಗೆ ನಿಮ್ಮಿಂದ ತಿಳಿದ್ದೇನೆ. ಈ ಎಲ್ಲಾ ಪದಗಳಿಗೂ ಮೀರಿದ ಬಾಂಧವ್ಯವನ್ನು ಹೊಂದಿದ್ದೇನೆ. ನೀವು ನನ್ನ ಜತೆಗೆ ಇರುವುದರಿಂದಲೇ ಈ ಜಗತ್ತು ಇನ್ನಷ್ಟು ಮೃದು ಅನಿಸುತ್ತಿದೆ. ನೀವು ನನ್ನ ಆತ್ಮೀಯ ಗೆಳೆಯ, ಪತಿ ಆಗಿರುವುದಕ್ಕೆ ಧನ್ಯವಾದಗಳು. ನನ್ನ ಜೀವನದ ಪ್ರೀತಿಗೆ ಮೊದಲ ವರ್ಷದ ವಾರ್ಷಿಕೋತ್ಸವದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಪಿ.ವಿ. ಸಿಂಧು ಅವರು ಕಳೆದ ಡಿಸೆಂಬರ್‌ನಲ್ಲಿ ಉದ್ಯಮಿ ವೆಂಕಟ ದತ್ತ ಸಾಯಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.