ADVERTISEMENT

ಏಷ್ಯಾ ಒಲಿಂಪಿಕ್‌ ಕೌನ್ಸಿಲ್‌ ಅಧ್ಯಕ್ಷರಾಗಿ ಜೋಹಾನ್‌ ಅವಿರೋಧ ಆಯ್ಕೆ

ಪಿಟಿಐ
Published 26 ಜನವರಿ 2026, 16:05 IST
Last Updated 26 ಜನವರಿ 2026, 16:05 IST
ಶೇಖ್ ಜೋಹಾನ್‌ ಬಿನ್‌ ಹಮದ್‌ ಅಲ್‌ ಥಾನಿ
ಶೇಖ್ ಜೋಹಾನ್‌ ಬಿನ್‌ ಹಮದ್‌ ಅಲ್‌ ಥಾನಿ   

ತಾಷ್ಕೆಂಟ್‌ (ಉಜ್ಬೇಕಿಸ್ತಾನ): ಕತಾರ್‌ನ ಶೇಖ್ ಜೋಹಾನ್‌ ಬಿನ್‌ ಹಮದ್‌ ಅಲ್‌ ಥಾನಿ ಅವರು ಏಷ್ಯಾ ಒಲಿಂಪಿಕ್‌ ಕೌನ್ಸಿಲ್‌ (ಏಒಸಿ) ಅಧ್ಯಕ್ಷರಾಗಿ ಸೋಮವಾರ ಅವಿರೋಧವಾಗಿ ಆಯ್ಕೆಯಾದರು. ಅವರು 2028ರವರೆಗೆ ಈ ಸ್ಥಾನದಲ್ಲಿರಲಿದ್ದಾರೆ.

ಜೋಹಾನ್‌ ಅವರು ಕತಾರ್‌ ಒಲಿಂಪಿಕ್‌ ಸಮಿತಿಯ ಅಧ್ಯಕ್ಷರಾಗಿದ್ದು, ರಾಷ್ಟ್ರೀಯ ಒಲಿಂಪಿಕ್‌ ಸಂಸ್ಥೆಗಳ ಜಾಗತಿಕ ಸಮಿತಿಯ ಹಿರಿಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. 2036ರ ಒಲಿಂಪಿಕ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಲು ಭಾರತ ಹಾಗೂ ಕತಾರ್‌ ಭಾರಿ ಕಸರತ್ತು ನಡೆಸುತ್ತಿವೆ. ಹೀಗಾಗಿ, ಜೋಹಾನ್‌ ಅವರ ಆಯ್ಕೆಯು ಕತಾರ್‌ಗೆ ಪೂರಕವಾಗಬಹುದು ಎನ್ನಲಾಗಿದೆ. 

ಜೋಹಾನ್‌ ಅವರು ಕತಾರ್‌ ದೊರೆ ತಮೀಮ್ ಬಿನ್ ಹಮದ್‌ ಅಲ್‌ ಥಾನಿ ಅವರ ತಮ್ಮ. ತಮೀಮ್‌ ಅವರು ಕಳೆದ 24 ವರ್ಷಗಳಿಂದ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ ಸದಸ್ಯರಾಗಿದ್ದಾರೆ.

ADVERTISEMENT

2021ರ ಸೆಪ್ಟೆಂಬರ್‌ನಿಂದ ಹಂಗಾಮಿ ಅಧ್ಯಕ್ಷರಾಗಿದ್ದ ಭಾರತದ ರಣಧೀರ್‌ ಸಿಂಗ್‌ ಅವರು ಅನಾರೋಗ್ಯದ ಕಾರಣದಿಂದಾಗಿ ರಾಜೀನಾಮೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.