ADVERTISEMENT

ಕ್ವೀನ್ಸ್‌ ಪ್ರೀಮಿಯರ್‌ ಲೀಗ್‌: ಕ್ರಿಕೆಟ್‌ನಲ್ಲಿ ಮಂಗಳೂರು ಕ್ವೀನ್ಸ್‌ ಪಾರಮ್ಯ

ಹಗ್ಗಜಗ್ಗಾಟದಲ್ಲಿ ಶಿವಮೊಗ್ಗ ಪ್ರಥಮ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 17:20 IST
Last Updated 15 ನವೆಂಬರ್ 2025, 17:20 IST
ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪ್ರಶಸ್ತಿ ಜಯಿಸಿದ ಶಿವಮೊಗ್ಗ ಕ್ವೀನ್ಸ್‌ ತಂಡ  -ಚಿತ್ರ: ಕಿಶೋರ್ ಕುಮಾರ್ ಬೋಳಾರ್
ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪ್ರಶಸ್ತಿ ಜಯಿಸಿದ ಶಿವಮೊಗ್ಗ ಕ್ವೀನ್ಸ್‌ ತಂಡ  -ಚಿತ್ರ: ಕಿಶೋರ್ ಕುಮಾರ್ ಬೋಳಾರ್   

ಬೆಂಗಳೂರು: ಪಾರ್ವತಿ ನಾಯರ್ ನಾಯಕತ್ವದ ಮಂಗಳೂರು ಕ್ವೀನ್ಸ್‌ ತಂಡವು ಶನಿವಾರ ಮುಕ್ತಾಯಗೊಂಡ ಕ್ವೀನ್ಸ್‌ ಪ್ರೀಮಿಯರ್‌ ಲೀಗ್‌ (ಕ್ಯೂಪಿಎಲ್‌) ಎರಡನೇ ಆವೃತ್ತಿಯ ಕ್ರೀಡೋತ್ಸವದ ಕ್ರಿಕೆಟ್‌ ಸ್ಪರ್ಧೆಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಅಂತಿಮ ಎಸೆತದವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಪಾರ್ವತಿ ನಾಯರ್‌ ಬಳಗವು 2 ರನ್‌ಗಳಿಂದ ನಿಧಿ ಸುಬ್ಬಯ್ಯ ನಾಯಕತ್ವದ ಬೆಳಗಾವಿ ಕ್ವೀನ್ಸ್‌ ತಂಡವನ್ನು ಮಣಿಸಿತು. ಮೈಸೂರು ಕ್ವೀನ್ಸ್‌ ತಂಡವು ತೃತೀಯ ಸ್ಥಾನ ಪಡೆದುಕೊಂಡಿತು.

ಸಿನಿ ತಾರೆಯರು ಆಟದಲ್ಲಿಯೂ ಒಂದು ಕೈ ನೋಡೋಣ ಎಂಬಂತೆ ಹಣಾಹಣಿ ನಡೆಸಿದ ಹಗ್ಗಜಗ್ಗಾಟ ಸ್ಪರ್ಧೆಯು ಪ್ರೇಕ್ಷಕರ ಮನಗೆದ್ದಿತು. ದೈಹಿಕ ಶ್ರಮ ಪ್ರಧಾನವಾಗಿದ್ದ ಈ ಸ್ಪರ್ಧೆಯಲ್ಲಿ ಶಿವಮೊಗ್ಗ ಕ್ವೀನ್ಸ್‌ ತಂಡವು ಪ್ರಶಸ್ತಿ ತನ್ನದಾಗಿಸಿಕೊಂಡಿತು.

ADVERTISEMENT

ಮೊದಲ ಸುತ್ತಿನಿಂದಲೂ ಪ್ರಾಬಲ್ಯ ಸಾಧಿಸಿದ್ದ ಬಳ್ಳಾರಿ ತಂಡವು ಫೈನಲ್‌ನಲ್ಲಿ ಎಡವಿತು. ಹುಬ್ಬಳ್ಳಿ ಕ್ವೀನ್ಸ್‌ ಆಟಗಾರ್ತಿಯರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಫಲಿತಾಂಶಗಳು

  • ಹಗ್ಗಜಗ್ಗಾಟ: ಶಿವಮೊಗ್ಗ ಕ್ವೀನ್ಸ್‌–1, ಬಳ್ಳಾರಿ ಕ್ವೀನ್ಸ್‌–2, ಹುಬ್ಬಳ್ಳಿ–3

  • ಕ್ರಿಕೆಟ್‌: ಮಂಗಳೂರು ಕ್ವೀನ್ಸ್‌–1, ಬೆಳಗಾವಿ ಕ್ವೀನ್ಸ್‌–2, ಮೈಸೂರು ಕ್ವೀನ್ಸ್‌–3.

  • ಲೂಡೊ: ಚಿತ್ರದುರ್ಗ ಕ್ವೀನ್ಸ್‌–1, ಹಾಸನ ಕ್ವೀನ್ಸ್‌–2

  • ಬ್ಯಾಸ್ಕೆಟ್‌ಬಾಲ್‌: ಕೋಲಾರ ಕ್ವೀನ್ಸ್‌–1, ಬೆಂಗಳೂರು ಕ್ವೀನ್ಸ್‌–2, ಚಿತ್ರದುರ್ಗ ಕ್ವೀನ್ಸ್‌–3

  • ಚೆಸ್‌: ಹಾಸನ್‌ ಕ್ವೀನ್ಸ್‌–1, ಬೆಂಗಳೂರು ಕ್ವೀನ್ಸ್‌–2, ಚಿತ್ರದುರ್ಗ ಕ್ವೀನ್ಸ್‌–3

  • ಬ್ಯಾಡ್ಮಿಂಟನ್‌: ಹುಬ್ಬಳ್ಳಿ ಕ್ವೀನ್ಸ್‌–1, ಶಿವಮೊಗ್ಗ ಕ್ವೀನ್ಸ್‌–2, ಹಾಸನ ಕ್ವೀನ್ಸ್‌–3

  • ಲೇಸರ್‌ ಟ್ಯಾಗ್‌: ಬಳ್ಳಾರಿ ಕ್ವೀನ್ಸ್‌–1, ಶಿವಮೊಗ್ಗ ಕ್ವೀನ್ಸ್‌–2, ಕೋಲಾರ ಕ್ವೀನ್ಸ್‌–3

  • ಪಿಕಲ್‌ಬಾಲ್‌: ಕೋಲಾರ ಕ್ವೀನ್ಸ್‌–1, ಶಿವಮೊಗ್ಗ ಕ್ವೀನ್ಸ್‌–2, ಬಳ್ಳಾರಿ ಕ್ವೀನ್ಸ್‌–3

  • ಬೌಲಿಂಗ್‌: ಬಳ್ಳಾರಿ ಕ್ವೀನ್ಸ್‌–1, ಮಂಗಳೂರು ಕ್ವೀನ್ಸ್‌–2, ಚಿತ್ರದುರ್ಗ ಕ್ವೀನ್ಸ್‌–3

  • ಕೇರಂ: ಮೈಸೂರು ಕ್ವೀನ್ಸ್‌–1, ಹಾಸನ ಕ್ವೀನ್ಸ್‌–2, ಚಿತ್ರದುರ್ಗ ಕ್ವೀನ್ಸ್‌–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.