ಪ್ರಜ್ಞಾನಂದ
(ಪಿಟಿಐ ಚಿತ್ರ)
ನವದೆಹಲಿ: ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್.ಪ್ರಜ್ಞಾನಂದ ಅವರು ವಿಶ್ವ ಚೆಸ್ ಚಾಂಪಿಯನ್ ಆಗಿರುವ ಸ್ವದೇಶದ ಗುಕೇಶ್ ಅವರನ್ನು ಲೈವ್ ರೇಟಿಂಗ್‌ನಲ್ಲಿ ಹಿಂದೆಹಾಕಿದ್ದಾರೆ.
ಹಾಲಿ ರೇಟಿಂಗ್ ಪ್ರಕಾರ ವಿಶ್ವಕಪ್ ರನ್ನರ್ ಅಪ್ ಪ್ರಜ್ಞಾನಂದ ಅವರು 2777.2 ರೇಟಿಂಗ್ ಪಾಯಿಂಟ್ಸ್ ಗಳಿಸಿ ಐದನೇ ಸ್ಥಾನಕ್ಕೆ ಏರಿದ್ದಾರೆ. ಗುಕೇಶ್ ಅವರು 2776.6 ರೇಟಿಂಗ್ ಪಾಯಿಂಟ್ಸ್ ಗಳಿಸಿ ಆರನೇ ಸ್ಥಾನಕ್ಕೆ ಸರಿದಿದ್ದಾರೆ.
2700 ಚೆಸ್.ಕಾಮ್ ಪ್ರಕಾರ ಭಾರತದ ಇನ್ನೊಬ್ಬ ಆಟಗಾರ ಅರ್ಜುನ್ ಇರಿಗೇಶಿ (2780.7) ಅವರು ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ವಿಶ್ವ ಚೆಸ್‌ನಲ್ಲಿ ಭಾರತ ಸಾಧಿಸುತ್ತಿರುವ ಪ್ರಗತಿಗೆ ಈ ಪೈಪೋಟಿ ನಿದರ್ಶನವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.