ADVERTISEMENT

ಶೂಟಿಂಗ್‌: ರಕ್ಷಾ, ದಿವ್ಯಾಂಶುಗೆ ಅಗ್ರಸ್ಥಾನ

ಪಿಟಿಐ
Published 10 ಜನವರಿ 2021, 13:46 IST
Last Updated 10 ಜನವರಿ 2021, 13:46 IST
ದಿವ್ಯಾಂಶು ಸಿಂಗ್ ಪನ್ವರ್ -ಟ್ವಿಟರ್ ಚಿತ್ರ
ದಿವ್ಯಾಂಶು ಸಿಂಗ್ ಪನ್ವರ್ -ಟ್ವಿಟರ್ ಚಿತ್ರ   

ನವದೆಹಲಿ: ತಮಿಳುನಾಡಿನ ಸಿ. ಕವಿ ರಕ್ಷಾ ಮತ್ತು ರಾಜಸ್ತಾನದ ದಿವ್ಯಾಂಶು ಸಿಂಗ್ ಪನ್ವರ್ ಇಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಶೂಟಿಂಗ್ ಟಿ–2 ಟ್ರಯಲ್ಸ್‌ನಲ್ಲಿ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ವಿಭಾಗದಲ್ಲಿ ಮೊದಲಿಗರಾದರು. ಜೂನಿಯರ್ ವಿಭಾಗದಲ್ಲಿ ರ‍್ಯಾಂಕ್ ಗಳಿಸಿ ಸೀನಿಯರ್ ವಿಭಾಗಕ್ಕೆ ಅರ್ಹತೆ ಪಡೆದಿರುವ ಕವಿ ರಕ್ಷಾ ಪ್ರಮುಖ ಶೂಟರ್‌ಗಳನ್ನು ಹಿಂದಿಕ್ಕಿದರು.

ಕಣದಲ್ಲಿದ್ದ ವಿಶ್ವ ರ‍್ಯಾಂಕಿಂಗ್‌ನಲ್ಲಿ ಒಂದನೇ ಸ್ಥಾನದಲ್ಲಿರುವ ಇಳವೆನ್ನಿಲ ವಾಳರಿವನ್, ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಅಪೂರ್ವಿ ಚಂಡೇಲ ಹಾಗೂ ಅಂಜುಮ್ ಮೌದ್ಗಿಲ್ ಅವರ ವಿರುದ್ಧ ಕವಿ ರಕ್ಷಾ251.4 ಸ್ಕೋರ್ ಗಳಿಸಿದರು. ರಾಜಸ್ತಾನದ ನಿಶಾ ಕನ್ವರ್ ಸ್ಕೋರ್‌ನೊಂದಿಗೆ 250.7 ದ್ವಿತೀಯ ಸ್ಥಾನ ಗಳಿಸಿದರು. ಇಳವೆನ್ನಿಲ ಮೂರನೆಯವರಾದರು. ಅವರುಟಿ–1 ವಿಭಾಗದಲ್ಲಿ ಮೊದಲಿಗರಾಗಿದ್ದರು.

60 ಶಾಟ್‌ಗಳ ಅರ್ಹತಾ ಸುತ್ತಿನಲ್ಲಿ ನಿಶಾ630.7 ಸ್ಕೋರ್ ಮಾಡಿ ಮೊದಲಿಗರಾಗಿದ್ದರು. ರಕ್ಷಾ 627.7 ಸ್ಕೋರ್‌ನೊಂದಿಗೆ ಏಳನೇ ಸ್ಥಾನಕ್ಕೆ ಕುಸಿದಿದ್ದರು.

ADVERTISEMENT

ಪುರುಷರ ವಿಭಾಗದ ಅರ್ಹತಾ ಸುತ್ತಿನಲ್ಲಿ ಪಂಜಾಬ್‌ನ ಅರ್ಜುನ್ ಬಬೂಟ632.1 ಸ್ಕೋರ್‌ಗಳೊಂದಿಗೆ ಅಗ್ರ ಸ್ಥಾನ ಗಳಿಸಿದ್ದರು. ಎಂಟು ಮಂದಿ ಕಣದಲ್ಲಿದ್ದ ಅಂತಿಮ ಸುತ್ತಿನಲ್ಲಿ ದಿವ್ಯಾಂಶು ಸಿಂಗ್ ಪನ್ವರ್ ಅಮೋಘ ಸಾಧನೆ ಮಾಡಿದರು.ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಪನ್ವರ್‌ 24 ಶಾಟ್‌ಗಳ ಅಂತಿಮ ಸುತ್ತಿನಲ್ಲಿ ಅವರು 250.9 ಸ್ಕೋರ್ ಗಳಿಸಿದರು. ಮಹಾರಾಷ್ಟ್ರದ ರುದ್ರಾಂಶ್‌ ಬಾಳಾಸಾಹೇಬ್‌ ಪಾಟೀಲ್ 249.7 ಸ್ಕೋರ್ ಗಳಿಸಿ ದ್ವಿತೀಯರಾದರು. ಟಿ–1 ವಿಭಾಗದ ವಿಜೇತ ಅಸ್ಸಾಂನ ಹೃದಯ್ ಅಜಾರಿಕಾ ಮೂರನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.