ADVERTISEMENT

ಬ್ಯಾಸ್ಕೆಟ್‌ಬಾಲ್‌: ರಾಮಯ್ಯ ಇನ್‌ಸ್ಟಿಟ್ಯೂಟ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 1 ಮೇ 2022, 14:24 IST
Last Updated 1 ಮೇ 2022, 14:24 IST
ಪ್ರಶಸ್ತಿ ವಿಜೇತ ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ತಂಡ: ಎಡದಿಂದ (ನಿಂತವರು): ಅಕ್ಷನ್‌, ಜೋಷುವಾ, ರೋಹನ್‌, ಪ್ರೀತಂ, ವಿಷ್ಣು, ಪ್ರದ್ಯುಮ್ನ. (ಕುಳಿತವರು) ದಿನೇಶ್, ಪ್ರಣವ್‌, ವಾಸು ಸಿಂಗ್‌, ಗೌರವ್‌, ಚಲ್ಲಾ ಶ್ರೀನಿವಾಸ್‌
ಪ್ರಶಸ್ತಿ ವಿಜೇತ ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ತಂಡ: ಎಡದಿಂದ (ನಿಂತವರು): ಅಕ್ಷನ್‌, ಜೋಷುವಾ, ರೋಹನ್‌, ಪ್ರೀತಂ, ವಿಷ್ಣು, ಪ್ರದ್ಯುಮ್ನ. (ಕುಳಿತವರು) ದಿನೇಶ್, ಪ್ರಣವ್‌, ವಾಸು ಸಿಂಗ್‌, ಗೌರವ್‌, ಚಲ್ಲಾ ಶ್ರೀನಿವಾಸ್‌   

ಬೆಂಗಳೂರು: ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಆರ್‌ಐಟಿ) ಕಾಲೇಜು ತಂಡವು ಅಖಿಲ ಭಾರತ ಅಂತರಕಾಲೇಜು ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದೆ.

ಕೆಂಗೇರಿಯ ಕ್ರೈಸ್ಟ್‌ ವಿಶ್ವವಿದ್ಯಾಲಯದ ಆವರಣದಲ್ಲಿ ಶನಿವಾರ ಕೊನೆಗೊಂಡ ‘ದೇವದನ್‌ ಕಪ್‌‘ ಚಾಂಪಿಯನ್‌ಷಿಪ್‌ನ ಫೈನಲ್ ಪಂದ್ಯದಲ್ಲಿ ಆರ್‌ಐಟಿ 50– 47ರಿಂದ ನಿಟ್ಟೆಯ ಮೀನಾಕ್ಷಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಎನ್‌ಎಂಐಟಿ) ವಿರುದ್ಧ ಜಯ ಸಾಧಿಸಿತು.

ವಿಜೇತ ತಂಡದ ಪರ ಜೋಷುವಾ 14, ಪ್ರದ್ಯುಮ್ನ 12 ಪಾಯಿಂಟ್ಸ್ ಕಲೆಹಾಕಿದರು. ಎನ್‌ಎಂಐಟಿ ಪರ ಸುಮಂತ್‌ 16 ಮತ್ತು ಭುವನ್‌ 15 ಪಾಯಿಂಟ್ಸ್ ಗಳಿಸಿದರು.

ADVERTISEMENT

ಪ್ರಶಸ್ತಿ ವಿಜೇತರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ತಂಡ: ಎಡದಿಂದ (ನಿಂತವರು): ಅಕ್ಷನ್‌, ಜೋಷುವಾ, ರೋಹನ್‌, ಪ್ರೀತಂ, ವಿಷ್ಣು, ಪ್ರದ್ಯುಮ್ನ. (ಕುಳಿತವರು) ದಿನೇಶ್, ಪ್ರಣವ್‌, ವಾಸು ಸಿಂಗ್‌, ಗೌರವ್‌, ಚಲ್ಲಾ ಶ್ರೀನಿವಾಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.