ADVERTISEMENT

Ranji Trophy: ಪಡಿಕ್ಕಲ್‌ ಬದಲಿಗೆ ಯಶೋವರ್ಧನ್‌ಗೆ ಸ್ಥಾನ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 23:12 IST
Last Updated 21 ಅಕ್ಟೋಬರ್ 2025, 23:12 IST
ಯಶೋವರ್ಧನ್‌ ಪರಂತಾಪ್‌
ಯಶೋವರ್ಧನ್‌ ಪರಂತಾಪ್‌   

ಬೆಂಗಳೂರು: ಗೋವಾ ಹಾಗೂ ಕೇರಳ ತಂಡಗಳ ವಿರುದ್ಧ ನಡೆಯಲಿರುವ ರಣಜಿ ಟ್ರೋಫಿ ಪಂದ್ಯಗಳಿಗೆ ದೇವದತ್ತ ಪಡಿಕ್ಕಲ್‌ ಬದಲು ಆಲ್‌ರೌಂಡರ್‌ ಯಶೋವರ್ಧನ್‌ ಪರಂತಾಪ್‌ ಅವರು ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿದ್ದದಾರೆ. ಉಳಿದಂತೆ ಮೊದಲ ಪಂದ್ಯದಲ್ಲಿ ಆಡಿದ ತಂಡವನ್ನೇ ಯಥಾಸ್ಥಿತಿ ಉಳಿಸಿಕೊಳ್ಳಲಾಗಿದೆ.

ಮಯಂಕ್‌ ಅಗರವಾಲ್‌ ನಾಯಕತ್ವದ ಕರ್ನಾಟಕ ತಂಡವು ಇದೇ 25ರಿಂದ 28ರವರೆಗೆ ಶಿವಮೊಗ್ಗದಲ್ಲಿ ಗೋವಾ ವಿರುದ್ಧ ಹಾಗೂ ನವೆಂಬರ್‌ 1ರಿಂದ 4ರ ವರೆಗೆ ತಿರುವನಂತಪುರದಲ್ಲಿ ಕೇರಳ ವಿರುದ್ಧ ಆಡಲಿದೆ. ಎಡಗೈ ಬ್ಯಾಟರ್‌ ದೇವದತ್ತ ಅವರು ದಕ್ಷಿಣ ಆಫ್ರಿಕಾ ‘ಎ’ ತಂಡದ ಎದುರು ನಡೆಯಲಿರುವ ಎರಡು ‘ಟೆಸ್ಟ್’ ಪಂದ್ಯಗಳಲ್ಲಿ ಆಡುವ ಭಾರತ ‘ಎ’ ತಂಡಕ್ಕೆ ಆಯ್ಕೆಯಾಗಿದ್ದಾರೆ.

ತಂಡ ಹೀಗಿದೆ: ಮಯಂಕ್ ಅಗರವಾಲ್ (ನಾಯಕ), ಕರುಣ್ ನಾಯರ್‌, ಸ್ಮರಣ್ ಆರ್‌., ಶ್ರೀಜಿತ್‌ ಕೆ.ಎಲ್‌. (ವಿಕೆಟ್‌ ಕೀಪರ್), ಶ್ರೇಯಸ್‌ ಗೋಪಾಲ್‌, ವಿದ್ವತ್‌ ಕಾವೇರಪ್ಪ, ಅಭಿಲಾಷ್‌ ಶೆಟ್ಟಿ, ವೆಂಕಟೇಶ್‌ ಎಂ., ಎಸ್‌.ಜೆ.ನಿಕಿನ್ ಜೋಸ್‌, ಅಭಿನವ್‌ ಮನೋಹರ್‌, ಕೃತಿಕ್ ಕೃಷ್ಣ (ವಿಕೆಟ್‌ ಕೀಪರ್‌), ಅನೀಶ್‌ ಕೆ.ವಿ., ಮೊಹ್ಸಿನ್‌ ಖಾನ್‌, ಶಿಖರ್ ಶೆಟ್ಟಿ, ಯಶೋವರ್ಧನ್‌ ಪರಂತಾಪ್‌.

ADVERTISEMENT

ಕೋಚ್‌: ಯರೇಗೌಡ ಕೆ., ಬೌಲಿಂಗ್‌ ಕೋಚ್‌: ಮನ್ಸೂರ್ ಅಲಿ ಖಾನ್‌, ಫೀಲ್ಡಿಂಗ್ ಕೋಚ್‌: ಶಬರೀಶ್ ಮೋಹನ್, ಮ್ಯಾನೇಜರ್‌: ರಮೇಶ್ ರಾವ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.