
ಪ್ರಜಾವಾಣಿ ವಾರ್ತೆ
ಚೆಸ್
ಬೆಂಗಳೂರು: ಸಾಯಿ ಸಹಾರಾ ಜಿ. ಹಾಗೂ ವಿಷ್ಣುದೇವ್ ಪರಮೇಶ್ ಅವರು ಚಾಂಪಿಯನ್ಸ್ ಚೆಸ್ ಅಕಾಡೆಮಿ ಭಾನುವಾರ ಆಯೋಜಿಸಿದ್ದ ರ್‍ಯಾಪಿಡ್ ಚೆಸ್ ಟೂರ್ನಿಯಲ್ಲಿ ಕ್ರಮವಾಗಿ 16 ಮತ್ತು 10 ವರ್ಷದೊಳಗಿನವರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.
16 ವರ್ಷದೊಳಗಿನವರ ವಿಭಾಗದಲ್ಲಿ ನಾಲ್ವರು ಸ್ಪರ್ಧಿಗಳು ತಲಾ 5 ಅಂಕ ಗಳಿಸಿದ್ದರಿಂದ ಟೈಬ್ರೇಕರ್ ಆಡಿಸಲಾಯಿತು. ಟೈಬ್ರೇಕರ್‌ನಲ್ಲಿ ಸಾಯಿ ಅವರು ಜಯಶಾಲಿ ಆಗುವುದರೊಂದಿಗೆ ಪ್ರಶಸ್ತಿ ತಮ್ಮದಾಗಿಸಿಕೊಂಡರು.
6 ಸುತ್ತುಗಳಿಂದ ಒಟ್ಟು 5.5 ಅಂಕ ಸಂಪಾದಿಸಿದ್ದ ವಿಷ್ಣುದೇವ್ ಅವರು 10 ವರ್ಷದೊಳಗಿನವರ ವಿಭಾಗದಲ್ಲಿ ಚಾಂಪಿಯನ್ ಆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.