ADVERTISEMENT

ರಿಚಾ ಘೋಷ್‌ ಹೆಸರಲ್ಲಿ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣ: ಮಮತಾ ಬ್ಯಾನರ್ಜಿ

ಪಿಟಿಐ
Published 10 ನವೆಂಬರ್ 2025, 13:43 IST
Last Updated 10 ನವೆಂಬರ್ 2025, 13:43 IST
ಭಾರತ ತಂಡದ ವಿಕೆಟ್‌ಕೀಪರ್ ರಿಚಾ ಘೋಷ್‌ –ಪಿಟಿಐ ಚಿತ್ರ
ಭಾರತ ತಂಡದ ವಿಕೆಟ್‌ಕೀಪರ್ ರಿಚಾ ಘೋಷ್‌ –ಪಿಟಿಐ ಚಿತ್ರ   

ಕೋಲ್ಕತ್ತ: ಸಿಲಿಗುರಿಯಲ್ಲಿ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣವಾಗಲಿದ್ದು, ರಿಚಾ ಘೋಷ್ ಅವರ ಹೆಸರನ್ನು ಇಡಲಾಗುವುದು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಇಲ್ಲಿ ತಿಳಿಸಿದ್ದಾರೆ.

22 ವರ್ಷ ವಯಸ್ಸಿನ ವಿಕೆಟ್ ಕೀಪರ್– ಬ್ಯಾಟರ್ ರಿಚಾ, ಭಾರತ ತಂಡ ಇತ್ತೀಚೆಗೆ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಕಾಣಿಕೆ ನೀಡಿದವರಲ್ಲಿ ಒಬ್ಬರಾಗಿದ್ದಾರೆ. ಅವರು ಉತ್ತರ ಬಂಗಾಳದ ಸಿಲಿಗುರಿಯವರು.

27 ಎಕರೆ ಜಮೀನಿನಲ್ಲಿ ‘ರಿಚಾ ಕ್ರಿಕೆಟ್ ಕ್ರೀಡಾಂಗಣ’ವನ್ನು ರಾಜ್ಯ ಸರ್ಕಾರ ಶೀಘ್ರ ಕೈಗೆತ್ತಿಕೊಳ್ಳಲಿದೆ  ಎಂದು ಬ್ಯಾನರ್ಜಿ ಸಿಲಿಗುರಿಯಲ್ಲಿ ತಿಳಿಸಿದರು.

ADVERTISEMENT

ರಿಚಾ ಅವರಿಗೆ ಪಶ್ಚಿನ ಬಂಗಾಳ ಸರ್ಕಾರ ಶನಿವಾರ ‘ಬಂಗ ಭೂಷಣ’ ಪ್ರಶಸ್ತಿ ನೀಡಿ ಗೌರವಿಸಿತ್ತು. ಜೊತೆಗೆ  ಡಿಎಸ್‌ಪಿ ಆಗಿ ನೇಮಕ ಮಾಡಿತ್ತು. ಅವರಿಗೆ ಚಿನ್ನದ ಸರವನ್ನೂ ಉಡುಗೊರೆಯಾಗಿ ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.