ADVERTISEMENT

ರೋಹನ್ ಬೋಪಣ್ಣ ಅಕಾಡೆಮಿಗೆ ಎಫ್‌ಸಿಆರ್‌ಎ

ಪಿಟಿಐ
Published 26 ಮಾರ್ಚ್ 2025, 15:52 IST
Last Updated 26 ಮಾರ್ಚ್ 2025, 15:52 IST
ರೋಹನ್ ಬೋಪಣ್ಣ
ರೋಹನ್ ಬೋಪಣ್ಣ   

ನವದೆಹಲಿ: ರೋಹನ್ ಬೋಪಣ್ಣ ಟೆನಿಸ್ ಅಭಿವೃದ್ಧಿ ಪ್ರತಿಷ್ಠಾನಕ್ಕೆ  ಕೇಂದ್ರ ಗೃಹ ಸಚಿವಾಲಯವು ವಿದೇಶಿ ಕೊಡುಗೆ ಕಾಯಿದೆ 2010ರ ಅಡಿಯಲ್ಲಿ ಎಫ್‌ಸಿಆರ್‌ಎ ಲೈಸೆನ್ಸ್‌ ನೀಡಿದೆ. 

‘ಪ್ರತಿಷ್ಠಾನವು ಲೈಸೆನ್ಸ್‌ಗಾಗಿ ಅರ್ಜಿ ಸಲ್ಲಿಸಿತ್ತು. ಅಗತ್ಯವಾದ ಎಲ್ಲ  ಅಧಿಕೃತ ಮಾಹಿತಿಗಳನ್ನು ಒದಗಿಸಿದೆ. ಆದ್ದರಿಂದ ಲೈಸೆನ್ಸ್ ಮಂಜೂರಾಗಿದೆ’ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. 

ಯಾವುದೇ ಸಂಘಟನೆಯು ವಿದೇಶದಿಂದ ಧನಸಹಾಯ ಪಡೆಯಲು ಎಫ್‌ಸಿಆರ್‌ಎ ಲೈಸೆನ್ಸ್‌ ಹೊಂದಿರುವುದು ಕಡ್ಡಾಯ. ಟೆನಿಸ್ ತಾರೆ ರೋಹನ್ ಬೋಪಣ್ಣ ಅವರು ಅಕಾಡೆಮಿಯನ್ನು ಸ್ಥಾಪನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ 2016ರಿಂದ ರೋಹನ್ ಬೋಪಣ್ಣ ಟೆನಿಸ್ ಅಕಾಡೆಮಿ (ಆರ್‌ಬಿಟಿಎ) ಕಾರ್ಯನಿರ್ವಹಿಸುತ್ತಿದೆ. ಟೆನಿಸ್ ತರಬೇತಿಯನ್ನು ನೀಡಲಾಗುತ್ತಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.