ನವದೆಹಲಿ: ಒಲಿಂಪಿಯನ್ ಅರ್ಜುನ್ ಬಾಬುತಾ ಅವರು ಪೆರುವಿನ ಲಿಮಾದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್‌ನ ಪುರುಷರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು. ರುದ್ರಾಂಕ್ಷ್ ಪಾಟೀಲ್ ಮತ್ತು ಆರ್ಯ ಬೋರ್ಸೆ ಜೋಡಿ 10 ಮೀ. ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಬೆಳ್ಳಿ ಜಯಿಸಿತು.
ಕಳೆದ ವರ್ಷ ಪ್ಯಾರಿಸ್ ಕ್ರೀಡಾಕೂಟ ದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಬಾಬುತಾ (252.3) ರೋಚಕ ಫೈನಲ್‌ನಲ್ಲಿ ಹಾಲಿ ಒಲಿಂಪಿಕ್ ಚಾಂಪಿಯನ್ ಚೀನಾದ ಶೆಂಗ್ ಲಿಹಾವೊ (252.4) ವಿರುದ್ಧ ಕೇವಲ 0.1 ಅಂಕಗಳಿಂದ ಸೋತರು.
ರುದ್ರಾಂಕ್ಷ್ ಮತ್ತು ಆರ್ಯ ಜೋಡಿಯು ಚಿನ್ನದ ಪದಕ ಸುತ್ತಿನಲ್ಲಿ 11–17ರಿಂದ ನಾರ್ವೆಯ ಜೋಡಿ ಜಾನ್ ಹರ್ಮನ್ ಹೆಗ್ ಮತ್ತು ಜೀನೆಟ್ ಹೆಗ್ ಡ್ಯುಸ್ಟಾಡ್ ವಿರುದ್ಧ ಪರಾಭವಗೊಂಡಿತು.
ಭಾರತದ ಶೂಟರ್‌ಗಳು ಈಗಾಗಲೇ ಎರಡು ಚಿನ್ನ ಮತ್ತು ಒಂದು ಕಂಚಿನ ಪದಕ ಗೆದ್ದಿದ್ದಾರೆ. ಈಗ ಎರಡು ಬೆಳ್ಳಿ ಪದಕ ಸೇರ್ಪಡೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.