ಟೋಕಿಯೊ: ವಿಶ್ವ ಚಾಂಪಿಯನ್‌ಷಿಪ್ ಮತ್ತು ಇತರ ಪ್ರಮುಖ ಅಥ್ಲೆಟಿಕ್ ಕೂಟಗಳಲ್ಲಿ ರಷ್ಯಾ ಅಥ್ಲೀಟುಗಳ ಮೇಲಿನ ನಿರ್ಬಂಧ ಮುಂದುವರಿದಿದೆ ಎಂದು ವಿಶ್ವ ಅಥ್ಲೆಟಿಕ್ಸ್ ಮುಖ್ಯಸ್ಥ ಸೆಬಾಸ್ಟಿಯನ್ ಕೊ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ಉಕ್ರೇನ್ ಜೊತೆಗೆ ಯುದ್ಧಕ್ಕಿಳಿದ ಕಾರಣ ರಷ್ಯಾ ಅಥ್ಲೀಟುಗಳಿಗೆ ನಿರ್ಬಂಧ ವಿಧಿಸಲಾಗಿತ್ತು.
ಕೆಲವು ಕ್ರೀಡೆಗಳಲ್ಲಿ ರಷ್ಯಾ ಅಥ್ಲೀಟುಗಳಿಗೆ ತಟಸ್ಥ ಅಥ್ಲೀಟುಗಳಾಗಿ ಪರಿಗಣಿಸಿ ಪ್ರವೇಶ ನೀಡಲಾಗುತ್ತಿದೆ. ಆದರೆ ವಿಶ್ವ ಅಥ್ಲೆಟಿಕ್ಸ್ ಪಟ್ಟು ಸಡಿಲಿಸಿಲ್ಲ. ಸುಮಾರು ಒಂದು ದಶಕದಿಂದ ರಷ್ಯಾ ಅಥ್ಲೀಟುಗಳು ಅಥ್ಲೆಟಿಕ್ಸ್‌ನಿಂದ ದೂರವಿದ್ದಾರೆ. ಉಕ್ರೇನ್ ಯುದ್ಧ ಆರಂಭವಾಗುವ ಮೊದಲು ಉದ್ದೀಪನ ಮದ್ದು ಹಗರಣದ ಕಾರಣ ರಷ್ಯಾವನ್ನು ಅಥ್ಲೆಟಿಕ್ಸ್‌ನಿಂದ ದೂರವಿರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.