ADVERTISEMENT

ಬ್ರಿಟ್ನಿ ಗ್ರಿನರ್‌ಗೆ 9.5 ವರ್ಷದ ಜೈಲುಶಿಕ್ಷೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 21:00 IST
Last Updated 4 ಆಗಸ್ಟ್ 2022, 21:00 IST
ಅಮೆರಿಕದ  ಎನ್‌ಬಿಎ ಮಹಿಳಾ ಬಾಸ್ಕೆಟ್‌ಬಾಲ್ ತಂಡದ ಆಟಗಾರ್ತಿ ಬ್ರಿಟ್ನಿ ಗ್ರೆನರ್ ಅವರನ್ನು ಪೊಲೀಸರು ಬಂಧಿಸಿ ಕರೆದೊಯ್ಯುತ್ತಿರುವುದು  –ಎಎಫ್‌ಪಿ ಚಿತ್ರ
ಅಮೆರಿಕದ  ಎನ್‌ಬಿಎ ಮಹಿಳಾ ಬಾಸ್ಕೆಟ್‌ಬಾಲ್ ತಂಡದ ಆಟಗಾರ್ತಿ ಬ್ರಿಟ್ನಿ ಗ್ರೆನರ್ ಅವರನ್ನು ಪೊಲೀಸರು ಬಂಧಿಸಿ ಕರೆದೊಯ್ಯುತ್ತಿರುವುದು  –ಎಎಫ್‌ಪಿ ಚಿತ್ರ   

ಕಿಮ್ಕಿ, ರಷ್ಯಾ: ಮಾದಕ ದ್ರವ್ಯ ಸಾಗಣೆ ಆರೋಪದಲ್ಲಿ ಸಿಲುಕಿರುವ ಅಮೆರಿಕದ ಬ್ಯಾಸ್ಕೆಟ್‌ಬಾಲ್ ತಾರೆ ಬ್ರಿಟ್ನಿ ಗ್ರಿನರ್ ಅವರಿಗೆ ಒಂಬತ್ತೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಬೇಕು ಎಂದು ರಷ್ಯಾದ ಸರ್ಕಾರಿ ಅಭಿಯೋಜಕರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

‘ಗ್ರಿನರ್ ತಪ್ಪಿತಸ್ಥರಾಗಿದ್ದಾರೆ. ಅವರಿಗೆ ಒಂಬತ್ತೂವರೆ ವರ್ಷಗಳ ಜೈಲು ಶಿಕ್ಷೆಯಾಗಬೇಕು’ ಎಂದು ಸರ್ಕಾರಿ ಅಭಿಯೋಜಕ ನಿಕೊಲೆ ವ್ಲಾಸೆಂಕೊ ಹೇಳಿದ್ದಾರೆ.

31 ವರ್ಷದ ಅಥ್ಲೀಟ್‌ಗೆ ₹ 13 ಲಕ್ಷ ದಂಡ ವಿಧಿಸಬೇಕು ಎಂದೂ ವಕೀಲರು ವಾದಿಸಿದ್ದಾರೆ.

ADVERTISEMENT

ಈಚೆಗೆ ನಿಷೇಧಿತ ಮಾದಕ ಪದಾರ್ಥಗಳನ್ನು ಸಾಗಿಸುತ್ತಿದ್ದ ಗ್ರಿನರ್ ಅವರನ್ನು ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.

ಉಕ್ರೇನ್‌ ಮೇಲೆ ಯುದ್ಧ ಸಾರಿರುವ ರಷ್ಯಾದ ವಿರುದ್ಧ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ನಿರ್ಬಂಧ ಹೇರಿವೆ. ಅಮೆರಿಕ ಮತ್ತು ರಷ್ಯಾದ ವೈಮನಸ್ಸು ಕೂಡ ಗ್ರಿನರ್ ಪ್ರಕರಣದ ಮೇಲೆ ಪ್ರಭಾವ ಬೀರಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.