ADVERTISEMENT

ಟೇಕ್ವಾಂಡೊ ಆಯ್ಕೆ ಸಮಿತಿ ಪುನಾರಚನೆಗೆ ಸಲಹೆ

ಪಿಟಿಐ
Published 25 ಮೇ 2021, 14:50 IST
Last Updated 25 ಮೇ 2021, 14:50 IST
ಟೇಕ್ವಾಂಡೊ ಕ್ರೀಡೆಯ ನೋಟ –ಪ್ರಜಾವಾಣಿ ಚಿತ್ರ
ಟೇಕ್ವಾಂಡೊ ಕ್ರೀಡೆಯ ನೋಟ –ಪ್ರಜಾವಾಣಿ ಚಿತ್ರ   

ನವದೆಹಲಿ: ಟೇಕ್ವಾಂಡೊ ಕ್ರೀಡೆಯ ಆಯ್ಕೆ ಸಮಿತಿಯನ್ನು ಪುನಾರಚಿಸುವಂತೆ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಭಾರತ ಒಲಿಂಪಿಕ್ ಸಂಸ್ಥೆಗೆ (ಐಒಎ) ಸೂಚಿಸಿದೆ. ಉಪಾಧ್ಯಕ್ಷ ಸಂಜಯ್ ಸಾರಸ್ವತ್ ಅವರು ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಹೇಳಿದ್ದರಿಂದ ಸಾಯ್ ಈ ಕ್ರಮಕ್ಕೆ ಮುಂದಾಗಿದೆ.

ಟೇಕ್ವಾಂಡೊ ಫೆಡರೇಷನ್ ಅಸ್ತಿತ್ವದಲ್ಲಿದ್ದರೂ ಅದಕ್ಕೆ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ನಿಂದ ಮಾನ್ಯತೆ ಇಲ್ಲ. ಹೀಗಾಗಿ ಅಂತರರಾಷ್ಟ್ರೀಯ ಕ್ರೀಡಾಕೂಟಗಳಿಗೆ ಅಥ್ಲೀಟ್‌ಗಳನ್ನು ಆಯ್ಕೆ ಮಾಡುವುದಕ್ಕಾಗಿ ಕಳೆದ ತಿಂಗಳಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಸಾಯ್ ಲಖನೌ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಸಂಜಯ್ ಸಾರಸ್ವತ್ ಅವರನ್ನು ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ಇಬ್ಬರು ಸಾಯ್ ಕೋಚ್‌ಗಳನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು.

‘ಕೆಲಸದ ಒತ್ತಡದ ನಡುವೆ ಸಮಿತಿಯ ಉಪಾಧ್ಯಕ್ಷರಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಐಒಎಗೆ ಬರೆದಿರುವ ಪತ್ರದಲ್ಲಿ ಸಂಜಯ್ ಹೇಳಿದ್ದಾರೆ. ಹೀಗಾಗಿ ಸಮಿತಿಯನ್ನು ಪುನಾರಚಿಸಲು ಮತ್ತು ಸಾಯ್ ಕೋಚ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ ಎಂದು ಸಾಯ್ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.