ADVERTISEMENT

120 ಜನರಿಂದ ರಕ್ತದಾನ

​ಪ್ರಜಾವಾಣಿ ವಾರ್ತೆ
Published 29 ಮೇ 2025, 16:02 IST
Last Updated 29 ಮೇ 2025, 16:02 IST
ಬೆಂಗಳೂರಿನ ಕೋರಮಂಗಲದ ಕೇಂದ್ರಿಯ ಭವನದಲ್ಲಿ ಗುರುವಾರ ಸೆಂಟ್ರಲ್ ಜಿಎಸ್‌ಟಿ ಮತ್ತು ಕಸ್ಟಮ್ಸ್‌ನ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ರಕ್ತದಾನ ಶಿಬಿರ ನಡೆಯಿತು. ಸಂಘದ ಪದಾಧಿಕಾರಿಗಳು ಹಾಜರಿದ್ದರು  
ಬೆಂಗಳೂರಿನ ಕೋರಮಂಗಲದ ಕೇಂದ್ರಿಯ ಭವನದಲ್ಲಿ ಗುರುವಾರ ಸೆಂಟ್ರಲ್ ಜಿಎಸ್‌ಟಿ ಮತ್ತು ಕಸ್ಟಮ್ಸ್‌ನ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ರಕ್ತದಾನ ಶಿಬಿರ ನಡೆಯಿತು. ಸಂಘದ ಪದಾಧಿಕಾರಿಗಳು ಹಾಜರಿದ್ದರು     

ಪ್ರಜಾವಾಣಿ ವಾರ್ತೆ

ಬೆಂಗಳೂರು: ಕೇಂದ್ರ ಜಿಎಸ್‌ಟಿ ಮತ್ತು ಕಸ್ಟಮ್ಸ್‌ ಕ್ರೀಡೆ ಹಾಗೂ ಸಾಂಸ್ಕೃತಿಕ ಕಲ್ಯಾಣ ಸಂಘಟನೆ ‘ಸಂಪ್ರಭ’ದ ಆಶ್ರಯದಲ್ಲಿ ಗುರುವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. 120 ಜನರು ರಕ್ತದಾನ ಮಾಡಿದರು.  

ಸಂಘಟನೆಯ ಸಮಾಜ ಸೇವಾ ಯೋಜನೆಯ ಅಂಗವಾಗಿ ಕೋರಮಂಗಲದ ಕೇಂದ್ರಿಯ ಸದನದಲ್ಲಿ ಶಿಬಿರ ನಡೆಯಿತು. ಜಯದೇವ ಹೃದ್ರೋಗ ಸಂಸ್ಥೆಯ ವೈದ್ಯಕೀಯ ತಂಡವು ಶಿಬಿರ ನಿರ್ವಹಿಸಿತು.

ADVERTISEMENT

ಇದೇ ಸಂದರ್ಭದಲ್ಲಿ ಎಸ್‌ಐಎಂಎಸ್‌ ಸಂಸ್ಥೆಯ ವಿಧಿವಿಜ್ಞಾನ ಔಷಧ ತಜ್ಞ ಮತ್ತು ಪ್ರಾಧ್ಯಾಪಕ ಡಾ. ದೇವದಾಸ್ ಅವರು  ಅಂಗಾಂಗ ದಾನದ ಮಹತ್ವದ ಕುರಿತು ಉಪನ್ಯಾಸ ನೀಡಿದರು.

ಸಂಪ್ರಭ ಸಂಸ್ಥೆಯ ಮುಖ್ಯಸ್ಥರಾದ, ನಿವೃತ್ತ ಐ.ಆರ್.ಎಸ್ ಅಧಿಕಾರಿ ಜಿ. ನಾರಾಯಣಸ್ವಾಮಿ, ಎಡಿಜಿ, ಸಿಪಿಡಬ್ಲ್ಯುಡಿ ಎನ್‌.ಎನ್‌.ಎಸ್‌.ಎಸ್‌. ರಾವ್, ಜಂಟಿ ಆಯುಕ್ತ ಶ್ರೇಯಸ್ ಅವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.