ADVERTISEMENT

PHOTOS | ಡಬ್ಲ್ಯುಡಬ್ಲ್ಯುಇ ಅಖಾಡಕ್ಕಿಳಿಯಲು ಭಾರತ ಮೂಲದ ಸಂಜನಾ ಜಾರ್ಜ್ ಸಿದ್ಧ

ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್‌ನಲ್ಲಿ (ಡಬ್ಲ್ಯುಡಬ್ಲ್ಯುಇ) ಸ್ಪರ್ಧಿಸಲು ಭಾರತ ಮೂಲದ ಸಂಜನಾ ಜಾರ್ಜ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಸಂತೋಷದ ಸುದ್ದಿಯನ್ನು ಕೇರಳ ಮೂಲದ ಸಂಜನಾ ಅವರೇ ಬಹಿರಂಗಪಡಿಸಿದ್ದಾರೆ. ಈ ಮೂಲಕ ಡಬ್ಲ್ಯುಡಬ್ಲ್ಯುಇನಲ್ಲಿ ಸ್ಪರ್ಧಿಸಲು ಅವಕಾಶ ಗಿಟ್ಟಿಸಿಕೊಂಡಿರುವ ಬೆರಳೆಣಿಕೆಯಭಾರತೀಯ ಮಹಿಳಾ ಸ್ಪರ್ಧಿಗಳ ಸಾಲಿಗೆ ಸೇರ್ಪಡೆಯಾಗಿದ್ದಾರೆ. (ಚಿತ್ರ ಕೃಪೆ: ಸಂಜನಾ ಜಾರ್ಜ್, ಇನ್‌ಸ್ಟಾಗ್ರಾಂ)

​ಪ್ರಜಾವಾಣಿ ವಾರ್ತೆ
Published 28 ಮೇ 2021, 10:50 IST
Last Updated 28 ಮೇ 2021, 10:50 IST
ಪುರುಷ ಪ್ರಧಾನ ಡಬ್ಲ್ಯುಡಬ್ಲ್ಯುಇನಲ್ಲಿ ಮಹಿಳೆಯರು ಯಾವುದರಲ್ಲೂ ಕಮ್ಮಿಯೇನಲ್ಲ ಎಂಬುದನ್ನು ಸಂಜನಾ ನಿರೂಪಿಸಿದ್ದಾರೆ.
ಪುರುಷ ಪ್ರಧಾನ ಡಬ್ಲ್ಯುಡಬ್ಲ್ಯುಇನಲ್ಲಿ ಮಹಿಳೆಯರು ಯಾವುದರಲ್ಲೂ ಕಮ್ಮಿಯೇನಲ್ಲ ಎಂಬುದನ್ನು ಸಂಜನಾ ನಿರೂಪಿಸಿದ್ದಾರೆ.   
ಚಿಕ್ಕವನಿಂದಲೂ ರೆಸ್ಲಿಂಗ್ ಬಗ್ಗೆ ಅತೀವ ಉತ್ಸುಕತೆಯನ್ನು ಸಂಜನಾ ಹೊಂದಿದ್ದರು.
ಅಮೆರಿಕದಲ್ಲಿ ತರಬೇತಿ ಪಡೆಯುತ್ತಿರುವ ಸಂಜನಾ 17ರ ಹರೆಯದಲ್ಲೇ ಮಿಕ್ಸೆಡ್ ಮಾರ್ಷಿಯಲ್ ಆರ್ಟ್ಸ್ ಪರಿಣತಿ ಪಡೆದಿದ್ದರು.
ಭಾರತದಲ್ಲಿ ಜನಿಸಿ ಡಬ್ಲ್ಯುಡಬ್ಲ್ಯುಇನಲ್ಲಿ ಕಣಕ್ಕಿಳಿಯುತ್ತಿರುವ ಎರಡನೇ ಮಹಿಳೆ ಎಂಬ ಖ್ಯಾತಿಗೆ ಸಂಜನಾ ಪಾತ್ರವಾಗಲಿದ್ದಾರೆ.
ಈ ಹಿಂದೆ ಕವಿತಾ ದೇವಿ (ಕವಿತಾ ದಲಾಲ್), ಡಬ್ಲ್ಯುಡಬ್ಲ್ಯುಇನಲ್ಲಿ ಪಾಲ್ಗೊಂಡಿದ್ದರು. ಪುರುಷ ವಿಭಾಗದಲ್ಲಿ 'ದಿ ಗ್ರೇಟ್ ಕಲಿ' ಖ್ಯಾತಿಯ ದಲೀಪ್ ಸಿಂಗ್ ರಾಣಾ ಹೆಚ್ಚು ಹೆಸರು ಮಾಡಿದ್ದರು.
ಡಬ್ಲ್ಯುಡಬ್ಲ್ಯುಇನಲ್ಲಿ ಹೊಡೆದಾಡಲು ದೇಹದಾರ್ಢ್ಯ ಜೊತೆಗೆ ಮಾನಿಸಿಕ ಬಲವೂ ಅತಿ ಮುಖ್ಯಮುವೆನಿಸುತ್ತದೆ.
ಡಬ್ಲ್ಯುಡಬ್ಲ್ಯುಇನಲ್ಲಿ ವರ್ಷದಲ್ಲಿ 500ರಷ್ಟು ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.
ವಿಶ್ವದ ಜನಪ್ರಿಯ ಶೋದಲ್ಲಿ ಪ್ರವೇಶಿಸುವ ಮುನ್ನ ಸಂಜನಾ ಅಮೆರಿಕದಲ್ಲಿ ಕಠಿಣ ತರಬೇತಿಯನ್ನು ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಸಿಕ್ಸ್ ಪ್ಯಾಕ್ ಪ್ರದರ್ಶಿಸುತ್ತಿರುವ ಸಂಜನಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.