ADVERTISEMENT

ಹಾಕಿ ಅಂಗಣದಿಂದ ‘ಸರದಾರ’ ದೂರ: ನಿವೃತ್ತಿ ಘೋಷಿಸಿದ ಸರದಾರ್ ಸಿಂಗ್

ಪಿಟಿಐ
Published 12 ಸೆಪ್ಟೆಂಬರ್ 2018, 15:57 IST
Last Updated 12 ಸೆಪ್ಟೆಂಬರ್ 2018, 15:57 IST
ಸರ್ದಾರ್ ಸಿಂಗ್‌
ಸರ್ದಾರ್ ಸಿಂಗ್‌   

ನವದೆಹಲಿ: ಒಂದು ದಶಕದಿಂದ ಭಾರತ ಹಾಕಿ ತಂಡದಲ್ಲಿ ಮಿಂಚಿದ್ದ ಸರದಾರ್‌ ಸಿಂಗ್‌ ಅವರು ಬುಧವಾರ ನಿವೃತ್ತಿ ಘೋಷಿಸಿದ್ದಾರೆ. ಏಷ್ಯನ್ ಕ್ರೀಡಾಕೂಟದಲ್ಲಿ ನೀರಸ ಆಟ ಆಡಿದ್ದು ಭಾರತಕ್ಕೆ ಚಿನ್ನ ಗೆದ್ದುಕೊಡಲು ಸಾಧ್ಯವಾಗದೇ ಇದ್ದುದಕ್ಕೆ ಬೇಸರಗೊಂಡು ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.

‘ಕುಟುಂಬದ ಸದಸ್ಯರು, ಗೆಳೆಯರು ಮತ್ತು ಹಾಕಿ ಇಂಡಿಯಾದ ಹಿರಿಯರ ಜೊತೆ ಚರ್ಚಿಸಿದ ನಂತರ ಈ ನಿರ್ಧಾರ ಕೈಗೊಂಡಿದ್ದೇನೆ. ವೃತ್ತಿಜೀವನದಲ್ಲಿ 12 ವರ್ಷ ಎಂದರೆ ಸಣ್ಣ ಅವಧಿಯಲ್ಲ. ಈಗ ನಿವೃತ್ತಿಗೆ ಸಕಾಲ ಎಂದು ಅನಿಸಿದೆ’ ಎಂದು ಅವರು ಸುದ್ದಿಸಂಸ್ಥೆಗೆ ವಿವರಿಸಿದರು.

ಏಷ್ಯನ್ ಕ್ರೀಡಾಕೂಟದ ನಂತರ ಅವರು ‘ನನ್ನಲ್ಲಿ ಇನ್ನೂ ಆಟ ಆಡುವ ಸಾಮರ್ಥ್ಯ ಇದ್ದು 2020ರ ಒಲಿಂಪಿಕ್ಸ್ ಆಡಲು ಬಯಸಿದ್ದೇನೆ’ ಎಂದು ಹೇಳಿದ್ದರು. ಹಾಕಿ ಇಂಡಿಯಾವು ಬುಧವಾರ 25 ಆಟಗಾರರನ್ನು ರಾಷ್ಟ್ರೀಯ ಶಿಬಿರಕ್ಕಾಗಿ ಆಯ್ಕೆ ಮಾಡಿತ್ತು. ಅದರಲ್ಲಿ ಸರ್ದಾರ್ ಸಿಂಗ್ ಹೆಸರು ಇರಲಿಲ್ಲ. ಇದರಿಂದ ಬೇಸರಗೊಂಡು ಅವರು ನಿವೃತ್ತಿ ಘೋಷಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಆಟಗಾರರ ಹೆಸರನ್ನು ಪ್ರಕಟಿಸುವ ಮೊದಲೇ ನಿವೃತ್ತಿ ಘೋಷಿಸಿರುವುದಾಗಿ ಸರ್ದಾರ್ ಸ್ಪಷ್ಟಪಡಿಸಿದ್ದಾರೆ.

ADVERTISEMENT

ಸರ್ದಾರ್ ಸಿಂಗ್‌ ಬಗ್ಗೆ...

ವಯಸ್ಸು: 32

ಹುಟ್ಟೂರು: ಸೀರ್ಸಾ, ಹರಿಯಾಣ

2006: ಪಾಕಿಸ್ತಾನ ಎದುರು ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯ

2008ರಿಂದ 2016: ಭಾರತ ತಂಡದ ನಾಯಕ

ಒಟ್ಟು ಅಂತರರಾಷ್ಟ್ರೀಯ ಪಂದ್ಯಗಳು: 350

2012: ಅರ್ಜುನ ಪ್ರಶಸ್ತಿ

2015: ಪದ್ಮಶ್ರೀ ಪ್ರಶಸ್ತಿ

2018: ಕಾಮನ್‌ವೆಲ್ತ್‌ ಕ್ರೀಡಾಕೂಟದ ತಂಡದಿಂದ ಹೊರಗೆ

ಚಾಂಪಿಯನ್ಸ್‌ ಟ್ರೋಫಿಯಲ್ಲಿ ವಾಪಸ್‌ ತಂಡಕ್ಕೆ ಮರಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.