ADVERTISEMENT

ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್: ಎರಡನೇ ಸುತ್ತಿಗೆ ಸಾತ್ವಿಕ್‌–ಚಿರಾಗ್

ಪಿಟಿಐ
Published 15 ಅಕ್ಟೋಬರ್ 2025, 19:49 IST
Last Updated 15 ಅಕ್ಟೋಬರ್ 2025, 19:49 IST
<div class="paragraphs"><p>ಸಾತ್ವಿಕ್‌– ಚಿರಾಗ್ ಜೋಡಿ </p></div>

ಸಾತ್ವಿಕ್‌– ಚಿರಾಗ್ ಜೋಡಿ

   

ಪಿಟಿಐ ಚಿತ್ರ

ಒಡೆನ್ಸ್‌: ಆರನೇ ಶ್ರೇಯಾಂಕದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಜೋಡಿ, ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಸೂಪರ್‌ 750 ಟೂರ್ನಿಯಲ್ಲಿ ಸ್ಕಾಟ್ಲೆಂಡ್‌ನ ಕ್ರಿಸ್ಟೋಫರ್ ಗ್ರಿಮ್ಲಿ– ಮ್ಯಾಥ್ಯೂ ಜೋಡಿಯನ್ನು ತೀವ್ರ ಹೋರಾಟದ ನಂತರ ಸೋಲಿಸಿ ಎರಡನೇ ಸುತ್ತು ತಲುಪಿತು.

ADVERTISEMENT

ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಆಟಗಾರರು 17–21, 21–11, 21–17 ರಿಂದ ಸ್ಕಾಟೆಂಡ್‌ನ ಜೋಡಿಯ ಮೇಲೆ ಜಯಗಳಿಸಿದರು. ಸಾತ್ವಿಕ್‌–ಚಿರಾಗ್ ಮುಂದಿನ ಸುತ್ತಿನಲ್ಲಿ ತೈವಾನ್‌ನ ಲೀ ಝೆ–ಹಯಿ– ಯಾಂಗ್ ಪೊ–ಸುವಾನ್ ಜೋಡಿಯನ್ನು ಎದುರಿಸಲಿದೆ.

ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್‌ ಹಿನ್ನಡೆಯಿಂದ ಚೇತರಿಸಿ ಐರ್ಲೆಂಡ್‌ನ ನ್ಹಾಟ್‌ ನುಯೆನ್ ಅವರನ್ನು 10–21, 21–8, 21–8 ರಿಂದ ಸೋಲಿಸಿ ಶುಭಾರಂಭ ಮಾಡಿದರು.

ಮಿಶ್ರ ಡಬಲ್ಸ್‌ನಲ್ಲಿ ಭಾರತದ ಮೋಹಿತ್‌ ಜಗ್ಲಾನ್‌– ಲಕ್ಷಿತಾ ಜಗ್ಲಾನ್ ಜೋಡಿ 14–21, 11–21 ರಲ್ಲಿ ಇಂಡೊನೇಷ್ಯಾದ ಅದ್ನಾನ್‌ ಮೌಲಾನಾ– ಇನ್‌ದಾ ಕಹ್ಯ ಜಮಿಲ್ ಜೋಡಿಗೆ ಮಣಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.