ADVERTISEMENT

ಧಾರವಾಡ ಸಾಯಿ ತಂಡ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2018, 13:28 IST
Last Updated 27 ನವೆಂಬರ್ 2018, 13:28 IST
ವಿಜಯಪುರ ತಾಲ್ಲೂಕು ಆಹೇರಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಅಂತರರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಮುಕ್ತ ಕಬಡ್ಡಿ ಪಂದ್ಯಾವಳಿಯ ಅಂತಿಮ ಪಂದ್ಯದ ದೃಶ್ಯ
ವಿಜಯಪುರ ತಾಲ್ಲೂಕು ಆಹೇರಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಅಂತರರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಮುಕ್ತ ಕಬಡ್ಡಿ ಪಂದ್ಯಾವಳಿಯ ಅಂತಿಮ ಪಂದ್ಯದ ದೃಶ್ಯ   

ವಿಜಯಪುರ: ಅಂತರರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಮುಕ್ತ ಕಬಡ್ಡಿ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಬೆಳಗಾವಿ ಮಹಾಲಕ್ಷ್ಮೀ ತಂಡದ ವಿರುದ್ಧ ಧಾರವಾಡ ಸಾಯಿ ತಂಡ 28–11 ಅಂಕಗಳಿಂದ ಗೆಲುವು ಸಾಧಿಸಿ ಚಾಂಪಿಯನ್ನಾಗಿ ಹೊರಹೊಮ್ಮಿತು.

ತಾಲ್ಲೂಕಿನ ಆಹೇರಿ ಗ್ರಾಮದಲ್ಲಿ ರಾಷ್ಟ್ರೀಯ ಕ್ರೀಡಾ ಸಂಘ, ರಾಜ್ಯ ಅಮೆಚೂರಕಬಡ್ಡಿ ಅಸೋಸಿಯೇಷನ್‌ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಪಂದ್ಯಾವಳಿಯ ಚಾಂಪಿಯನ್‌ ಧಾರವಾಡ ಸಾಯಿ ತಂಡಕ್ಕೆ ₹ 50000, ರನ್ನರ್‌ಆಪ್‌ ಬೆಳಗಾವಿ ಮಹಾಲಕ್ಷ್ಮೀ ತಂಡಕ್ಕೆ ₹ 30000, ತೃತೀಯ ಸ್ಥಾನ ಪಡೆದ ಸಿದ್ದಿ ಸ್ಪೋರ್ಟ್ಸ್‌ ಕ್ಲಬ್ ಮುಂಬೈ ತಂಡಕ್ಕೆ ₹ 20000, ನಾಲ್ಕನೇ ಸ್ಥಾನ ಪಡೆದ ಶಿವ ಛತ್ರಪತಿಕಡ್ಲಾಸ ತಂಡಕ್ಕೆ ₹ 10000 ನಗದು ಹಾಗೂ ಟ್ರೋಫಿನೀಡಲಾಯಿತು.

ಮುಖಂಡ ಅಣ್ಣಪ್ಪಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಂಘಟಕ ಬಂಡೆಪ್ಪ ತೇಲಿ ಮಾತನಾಡಿದರು. ಹೆಸ್ಕಾಂ ಸಹಾಯಕ ಎಂಜಿನಿಯರ್‌ ಜಯಸಿಂಗ್ ಚವ್ಹಾಣ, ಗ್ರಾಮ ಪಂಚಾಯ್ತಿ ಸದಸ್ಯ ರವೀಂದ್ರ ದೇಶಮುಖ, ರಮೇಶ ಕೊಣಶಿರಸಗಿ, ಮಲ್ಲನಗೌಡ ಬಿರಾದಾರ, ಮಲ್ಲು ವಾಲಿಕಾರ, ಶ್ರೀಶೈಲ ದೊಡಮನಿ, ಆರತಿ ಕಲಶೆಟ್ಟಿ ಇದ್ದರು. ಶರಣಗೌಡ ಪಾಟೀಲ ಸ್ವಾಗತಿಸಿದರು. ಪ್ರವೀಣ ಇಬ್ರಾಹಿಂಪುರ ನಿರೂಪಿಸಿದರು. ಶರಣಬಸು ಕುಮಟಗಿ ವಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.