ADVERTISEMENT

ಹಾಕಿ: ಪಂಜಾಬ್‌–ಆರ್‌ಎಸ್‌ಪಿಬಿ ಫೈನಲ್‌ ಪೈಪೋಟಿ

ಪಿಟಿಐ
Published 9 ಫೆಬ್ರುವರಿ 2019, 15:57 IST
Last Updated 9 ಫೆಬ್ರುವರಿ 2019, 15:57 IST
ಆಕಾಶ್‌ದೀಪ್‌ ಸಿಂಗ್‌
ಆಕಾಶ್‌ದೀಪ್‌ ಸಿಂಗ್‌   

ಗ್ವಾಲಿಯರ್‌, ಮಧ್ಯಪ್ರದೇಶ: ಹಾಲಿ ಚಾಂಪಿಯನ್‌ ಪಂಜಾಬ್‌ ಮತ್ತು ರೈಲ್ವೆ ಸ್ಪೋರ್ಟ್ಸ್‌ ಪ್ರೊಮೋಷನ್‌ ಬೋರ್ಡ್‌ (ಆರ್‌ಎಸ್‌ಪಿಬಿ) ತಂಡಗಳು ರಾಷ್ಟ್ರೀಯ ಸೀನಿಯರ್‌ ‘ಎ’ ಡಿವಿಷನ್‌ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

ಶನಿವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಪಂಜಾಬ್‌ 2–0 ಗೋಲುಗಳಿಂದ ಪಂಜಾಬ್‌ ಆ್ಯಂಡ್‌ ಸಿಂದ್‌ ಬ್ಯಾಂಕ್‌ ತಂಡವನ್ನು ಸೋಲಿಸಿತು.

ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತ ತಂಡದ ಪರ ಆಟ ಆಡಿದ ಅನುಭವ ಹೊಂದಿರುವ ಆಕಾಶ್‌ದೀಪ್‌ ಸಿಂಗ್‌ ಮತ್ತು ಧರಮ್‌ವೀರ್‌ ಸಿಂಗ್‌ ಅವರು ಕ್ರಮವಾಗಿ ಎಂಟು ಮತ್ತು 39ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಪಂಜಾಬ್‌ ತಂಡದ ಸಂಭ್ರಮಕ್ಕೆ ಕಾರಣರಾದರು.

ADVERTISEMENT

ನಾಲ್ಕರ ಘಟ್ಟದ ಇನ್ನೊಂದು ಹೋರಾಟದಲ್ಲಿ ಆರ್‌ಎಸ್‌ಪಿಬಿ ತಂಡ ಶೂಟೌಟ್‌ನಲ್ಲಿ 5–4 ಗೋಲುಗಳಿಂದ ಪೆಟ್ರೋಲಿಯಂ ಸ್ಪೋರ್ಟ್ಸ್‌ ಪ್ರೊಮೋಷನ್‌ ಬೋರ್ಡ್‌ (ಪಿಎಸ್‌ಪಿಬಿ) ತಂಡವನ್ನು ಮಣಿಸಿತು.

ನಿಗದಿತ 60 ನಿಮಿಷಗಳ ಆಟ ಮುಗಿದಾಗ ಉಭಯ ತಂಡಗಳು 2–2 ಗೋಲುಗಳಿಂದ ಸಮಬಲ ಸಾಧಿಸಿದ್ದವು. ಶೂಟೌಟ್‌ನಲ್ಲಿ ಆರ್‌ಎಸ್‌ಪಿಬಿ ಆಟಗಾರರು ಮೋಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.