ADVERTISEMENT

ಶೂಟಿಂಗ್‌: ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಚಿಂಕಿ

ಪಿಟಿಐ
Published 8 ನವೆಂಬರ್ 2019, 19:35 IST
Last Updated 8 ನವೆಂಬರ್ 2019, 19:35 IST
ಟ್ವಿಟರ್‌ ಚಿತ್ರ
ಟ್ವಿಟರ್‌ ಚಿತ್ರ   

ದೋಹಾ: ಚಿಂಕಿ ಯಾದವ್‌ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ 11ನೇ ಶೂಟಿಂಗ್‌ ಸ್ಪರ್ಧಿ ಎನಿಸಿದರು. 14ನೇ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಅವರು ಶುಕ್ರವಾರ ಪದಕ ಗೆಲ್ಲಲಾಗದಿದ್ದರೂ, ಅರ್ಹತಾ ಸುತ್ತಿನಲ್ಲಿ ವೈಯಕ್ತಿಕ ಶ್ರೇಷ್ಠ ಸ್ಕೋರ್‌ 588 ದಾಖಲಿಸಿದರು.

ಮಧ್ಯಪ್ರದೇಶ ಕ್ರೀಡಾ ಇಲಾಖೆಯ ಎಲೆಕ್ಟ್ರೀಷಿಯನ್‌ ಪುತ್ರಿಯಾಗಿರುವ ಚಿಂಕಿ, ಲುಸಾಲಿ ಶೂಟಿಂಗ್‌ ರೇಂಜ್‌ನಲ್ಲಿ ನಡೆದ ಮಹಿಳೆಯರ 25 ಮೀ. ಪಿಸ್ತೂಲ್‌ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದರು. ಫೈನಲ್‌ನಲ್ಲಿ ಅವರು 116 ಸ್ಕೋರ್‌ನೊಡನೆ ಆರನೇ ಸ್ಥಾನ ಗಳಿಸಿದರು.

ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಮತ್ತು ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ವಿಜೇತರಾದ ಚಿಂಕಿ ಟೋಕಿಯೊ ಕೂಟಕ್ಕೆ ಅರ್ಹತೆ ಪಡೆಯಬೇಕಾದರೆ ಇಲ್ಲಿ ಫೈನಲ್‌ಗೆ ತೇರ್ಗಡೆ ಪಡೆಯಬೇಕಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.