ನವದೆಹಲಿ: ಭಾರತದ ಶೌರ್ಯ ಬಾವಾ ಅವರು ಹೂಸ್ಟನ್‌ನಲ್ಲಿ ನಡೆಯುತ್ತಿರುವ ವಿಶ್ವ ಜೂನಿಯಷ್ ಸ್ವ್ಕಾಷ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
ಪುರುಷರ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ
5-11, 5-11, 9-11ರಿಂದ ಮೊಹಮ್ಮದ್ ಜಕಾರಿಯಾ (ಈಜಿಪ್ಟ್) ಅವರಿಗೆ ಮಣಿದರು.
ಕುಶ್ ಕುಮಾರ್ (2014) ನಂತರ ವಿಶ್ವ ಜೂನಿಯರ್‌ನಲ್ಲಿ ಸೆಮಿಫೈನಲ್ ತಲುಪಿದ ಭಾರತದ ಎರಡನೇ ಸ್ಪರ್ಧಿ ಶೌರ್ಯ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.