ADVERTISEMENT

ರಾಜ್ಯದ ಬಾಲಕಿಯರ ರಿಲೇ ತಂಡಕ್ಕೆ ಬೆಳ್ಳಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 19:31 IST
Last Updated 7 ಜೂನ್ 2022, 19:31 IST

ಬೆಂಗಳೂರು: ಕರ್ನಾಟಕದ ಬಾಲಕಿಯರ ತಂಡವು ಖೇಲೊ ಇಂಡಿಯಾ ಯೂತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದೆ.

ಹರಿಯಾಣದ ಪಂಚಕುಲಾದಲ್ಲಿ ನಡೆಯುತ್ತಿರುವ ಕೂಟದ 4X100 ಮೀ. ರಿಲೇಯಲ್ಲಿ ಮಂಗಳವಾರ ರಾಜ್ಯದ ಆವಂತಿಕಾ ದೇವಾಡಿಗ, ಉನ್ನತಿ ಅಯ್ಯಪ್ಪ, ಪ್ರಿಯಾಂಕಾ ಒಲೆಕಾ ಮತ್ತು ನಿಯೋಲ್ ಆ್ಯನಾ ಕಾರ್ನೆಲಿಯೊ ಅವರಿದ್ದ ತಂಡಕ್ಕೆ ಪದಕ ಒಲಿಯಿತು. 48.89 ಸೆಕೆಂಡುಗಳಲ್ಲಿ ಈ ಅಥ್ಲೀಟ್‌ಗಳು ಗುರಿ ಮುಟ್ಟಿದರು.

ಈ ವಿಭಾಗದ ಚಿನ್ನದ ಪದಕವು ಮಹಾರಾಷ್ಟ್ರ (47.27 ಸೆ.) ಗೆದ್ದುಕೊಂಡರೆ, ಕಂಚು ತಮಿಳುನಾಡು (49.92 ಸೆ.) ತಂಡದ ಬಾಲಕಿಯರ ಪಾಲಾಯಿತು.

ADVERTISEMENT

ಸಂಯುಕ್ತಾ ಕಾಳೆಗೆ ಐದು ಚಿನ್ನ: ಮಹಾರಾಷ್ಟ್ರದ ಸಂಯುಕ್ತಾ ಕಾಳೆ ಅವರು ರಿಧಮಿಕ್ ಜಿಮ್ನಾಸ್ಟಿಕ್ಸ್‌ನಲ್ಲಿ ಎಲ್ಲ ಐದೂ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು.

ಬಾಲಕರ 100 ಮೀ. ಓಟದಲ್ಲಿ ಜಾರ್ಖಂಡ್‌ನ ಸದಾನಂದ ಕುಮಾರ್ ಚಿನ್ನದ ಪದಕ ಜಯಿಸಿದರು. 10.63 ಸೆಕೆಂಡುಗಳಲ್ಲಿ ಅವರು ಗುರಿ ತಲುಪಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.