ADVERTISEMENT

ಸಿಂಕ್‌ಫೀಲ್ಡ್ ಕಪ್ ಗ್ರ್ಯಾಂಡ್‌ ಚೆಸ್ ಟೂರ್‌: ಜಂಟಿ ಅಗ್ರಸ್ಥಾನದಲ್ಲಿ ಪ್ರಜ್ಞಾನಂದ

ಪಿಟಿಐ
Published 26 ಆಗಸ್ಟ್ 2025, 14:24 IST
Last Updated 26 ಆಗಸ್ಟ್ 2025, 14:24 IST
ಪ್ರಜ್ಞಾನಂದ
ಪ್ರಜ್ಞಾನಂದ   

ಸೇಂಟ್ ಲೂಯಿಸ್ (ಅಮೆರಿಕ): ಅಜೇಯ ಓಟ ಮುಂದುವರಿಸಿರುವ ಭಾರತದ ಗ್ರ್ಯಾಂಡ್‌ ಮಾಸ್ಟರ್ ಆರ್. ಪ್ರಜ್ಞಾನಂದ ಅವರು ಇಲ್ಲಿ ನಡೆಯುತ್ತಿರುವ ಸಿಂಕ್‌ಫೀಲ್ಡ್ ಕಪ್ ಗ್ರ್ಯಾಂಡ್‌ ಚೆಸ್ ಟೂರ್‌  ಏಳನೇ ಸುತ್ತಿನಲ್ಲಿ ಫ್ರಾನ್ಸ್‌ನ ಅಲಿರೇಜಾ ಫಿರೋಜ್ ಅವರನ್ನು ಮಣಿಸಿ ಜಂಟಿ ಅಗ್ರಸ್ಥಾನಕ್ಕೇರಿದರು. 

ಚೆನ್ನೈನ 20 ವರ್ಷದ ಆಟಗಾರನಿಗೆ ಟೂರ್ನಿಯಲ್ಲಿ ಇದು ಎರಡನೇ ಗೆಲುವು. ಮೊದಲ ಸುತ್ತಿನಲ್ಲಿ ವಿಶ್ವ ಚಾಂಪಿಯನ್‌ ಡಿ.ಗುಕೇಶ್‌ ಅವರಿಗೆ ಆಘಾತ ನೀಡಿದ್ದ ಪ್ರಜ್ಞಾನಂದ, ನಂತರ ಸತತ ಐದು ಸುತ್ತುಗಳಲ್ಲಿ ಡ್ರಾ ಸಾಧಿಸಿದ್ದರು. 4.5 ಅಂಕ ಗಳಿಸಿರುವ ಅವರು, ಅಮೆರಿಕದ ಫ್ಯಾಬಿಯಾನೊ ಕರುವಾನ (4.5) ಅವರೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ಲಯಕ್ಕಾಗಿ ಪರದಾಡುತ್ತಿರುವ ಭಾರತದ ಗ್ರ್ಯಾಂಡ್‌ಮಾಸ್ಟರ್‌ ಗುಕೇಶ್‌ (3) ಅವರಿಗೆ ಮತ್ತೊಂದು ಆಘಾತ ಎದುರಾಯಿತು. ಏಳನೇ ಸುತ್ತಿನಲ್ಲಿ ಅವರು, ಅಮೆರಿಕದ ವೆಸ್ಲಿ ಸೊ ಅವರಿಗೆ ಮಣಿದರು. ಈ ಗೆಲುವಿನೊಂದಿಗೆ ವೆಸ್ಲಿ (4) ಅವರು ತಮ್ಮದೇ ದೇಶದ ಲೆವೋನ್ ಅರೋನಿಯನ್‌  (4) ಅವರೊಂದಿಗೆ ಜಂಟಿ ಮೂರನೇ ಸ್ಥಾನ ಹಂಚಿಕೊಂಡರು. 

ADVERTISEMENT

ಉಳಿದ ಪಂದ್ಯಗಳಲ್ಲಿ ಪೋಲೆಂಡ್‌ನ ಡುಡಾ ಯಾನ್– ಕ್ರಿಸ್ಟೋಫ್ (3.5) ಅವರು ಉಜ್ಬೇಕಿಸ್ತಾನದ ನದಿರ್ಬೆಕ್ ಅಬ್ದುಸತ್ತಾರೋವ್ (1.5) ವಿರುದ್ಧ ಗೆಲುವು ಸಾಧಿಸಿದರು. ಕರುವಾನ ಅವರು ಅರೋನಿಯನ್‌ ಜೊತೆ ಡ್ರಾ ಮಾಡಿಕೊಂಡರು. ಫ್ರಾನ್ಸ್‌ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್‌ (3.5) ಅವರು ಅಮೆರಿಕದ ಸಾಮುಯೆಲ್‌ ಸಾವಿಯಾನ್ (3.5) ಅವರೊಂದಿಗೆ ಅಂಕ ಹಂಚಿಕೊಂಡರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.