ADVERTISEMENT

ಬೆಂಗಳೂರು | ಟೆನಿಸ್‌: ಜೈನ್‌ ವಿಶ್ವವಿದ್ಯಾಲಯ ತಂಡ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2023, 16:59 IST
Last Updated 12 ನವೆಂಬರ್ 2023, 16:59 IST
ಟ್ರೋಫಿಯೊಂದಿಗೆ ಜೈನ್‌ ವಿಶ್ವವಿದ್ಯಾಲಯದ ಟೆನಿಸ್‌ ತಂಡ
ಟ್ರೋಫಿಯೊಂದಿಗೆ ಜೈನ್‌ ವಿಶ್ವವಿದ್ಯಾಲಯದ ಟೆನಿಸ್‌ ತಂಡ   

‌‌ಬೆಂಗಳೂರು: ಇಲ್ಲಿನ ಜೈನ್‌ ವಿಶ್ವವಿದ್ಯಾಲಯ ತಂಡವು ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಮಹಿಳಾ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

ಕನಕಪುರದ ಜೈನ್‌ ಗ್ಲೋಬಲ್‌ ಕ್ಯಾಂಪಸ್‌ನಲ್ಲಿ ಶುಕ್ರವಾರ ನಡೆದ ಫೈನಲ್‌ ಪಂದ್ಯದಲ್ಲಿ ಜೈನ್‌ ತಂಡವು 2–1ರಿಂದ ತಮಿಳುನಾಡಿನ ಯುನಿವರ್ಸಿಟಿ ಆಫ್‌ ಮದ್ರಾಸ್‌ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದಿತು. ಮದ್ರಾಸ್‌ ತಂಡ ರನ್ನರ್‌ ಅಪ್‌ ಆಯಿತು.

ಸೆಮಿಫೈನಲ್‌ನಲ್ಲಿ ಜೈನ್‌ ತಂಡವು 2–1ರಿಂದ ಎಸ್‌ಆರ್‌ಎಂ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಟೆಕ್ನಾಲಜಿ ವಿರುದ್ಧ; ಮದ್ರಾಸ್‌ ತಂಡವು 2–1ರಿಂದ ಅದೇ ರಾಜ್ಯದ ಉಸ್ಮಾನಿಯಾ ವಿಶ್ವವಿದ್ಯಾಲಯ ವಿರುದ್ಧ ಗೆಲುವು ಸಾಧಿಸಿತ್ತು.

ADVERTISEMENT

ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಎಸ್‌ಆರ್‌ಎಂ ತಂಡವು 2–0ಯಿಂದ ಉಸ್ಮಾನಿಯಾ ತಂಡವನ್ನು ಸೋಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.