ADVERTISEMENT

ಹೈದರಾಬಾದಿನಲ್ಲಿ ದಕ್ಷಿಣ ವಲಯ ಈಜು: ಕರ್ನಾಟಕದ ರೇಣುಕಾಚಾರ್ಯ,ಅದಿತಿಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 22:31 IST
Last Updated 27 ಡಿಸೆಂಬರ್ 2025, 22:31 IST
   

ಬೆಂಗಳೂರು: ಕರ್ನಾಟಕದ ರೇಣುಕಾಚಾರ್ಯ ಹೊದಮನಿ ಮತ್ತು ಅದಿತಿ ವಿನಾಯಕ ರೆಲೆಕರ್ ಅವರು ಹೈದರಾಬಾದಿನ ಗಚ್ಚಿಬೌಲಿಯಲ್ಲಿ ಶನಿವಾರ ನಡೆದ 36ನೇ ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಚಿನ್ನ ಗೆದ್ದರು. 

15 ರಿಂದ 17 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ 1500 ಮೀ ಫ್ರೀಸ್ಟೈಲ್‌ನಲ್ಲಿ ರೇಣುಕಾಚಾರ್ಯ ಹಾಗೂ ಬಾಲಕಿಯರ ವಿಭಾಗದಲ್ಲಿ ಅದಿತಿ ಪ್ರಥಮ ಸ್ಥಾನ ಗಳಿಸಿದರು. 

ಎಲ್ಲ ಸ್ಪರ್ಧೆಗಳೂ ಲಾಂಗ್‌ಕೋರ್ಸ್‌ ಈಜುಕೊಳದಲ್ಲಿ ನಡೆದವು. 

ADVERTISEMENT

ಫಲಿತಾಂಶಗಳು: ಬಾಲಕರು (ಗುಂಪು1):1500 ಮೀ ಫ್ರೀಸ್ಟೈಲ್: ರೇಣುಕಾಚಾರ್ಯ ಹೊದಮನಿ (ಕರ್ನಾಟಕ)–1, ಅಕ್ಷಜ್ ಪರಿಗಿ (ಕರ್ನಾಟಕ)–2, ಸಾಯಿ ಸ್ಮರಣ್ ನೆಲ್ಲೂರಿ (ತಮಿಳುನಾಡು)–3 ಕಾಲ: 17ನಿ,28.98ಸೆ. 

400 ಮೀ ಫ್ರೀಸ್ಟೈಲ್ (ಗುಂಪು 2): ಶ್ರೇಯಸ್ ಸುನಿಲ್ (ಕರ್ನಾಟಕ)–1, ಎಸ್‌. ಚಾರುತಕ್ಷಣ (ತಮಿಳುನಾಡು)–2, ಜಿ.ಡಿ. ರೋಹನ್ (ಕರ್ನಾಟಕ)–3, ಕಾಲ: 4ನಿ,29.70ಸೆ. 

200 ಮೀ ಫ್ರೀಸ್ಟೈಲ್ (ಗುಂಪು3): ಎಂ. ಚಿರಂತ್ (ಕರ್ನಾಟಕ)–1, ಲೋಹಿತಾಶ್ವ ನಾಗೇಶ್ (ಕರ್ನಾಟಕ)–2, ಮಾನವ್ ಕೆ ರಾಜೇಶ್ (ಕೇರಳ)–3 ಕಾಲ: 2ನಿ,15.96ಸೆ.

200 ಮೀ ಬ್ರೆಸ್ಟ್‌ಸ್ಟ್ರೋಕ್ (ಗುಂಪು1): ಸಾಯೀಶ್ ಕಿಣಿ (ಕರ್ನಾಟಕ)–1 ಕಾಲ: 2ನಿ,30.10ಸೆ.

200 ಮೀ ಬ್ರೆಸ್ಟ್‌ಸ್ಟ್ರೋಕ್ (ಗುಂಪು2): ಪಿ.ಪಿ. ಅಭಿಜೀತ್ (ಕೇರಳ)–1, ಸಿದ್ಧಾಂತ್ ಸಿಂಗ್ (ಕರ್ನಾಟಕ)–2, ಚಿರಾಯು ಟಿ ಜೀವನ್ (ಕರ್ನಾಟಕ)–3 ಕಾಲ: 2ನಿ,43. 42ಸೆ. 

50 ಮೀ ಬಟರ್‌ಫ್ಲೈ: ಎಸ್. ಕ್ರಿಷ್ (ಕರ್ನಾಟಕ)–1, ಇಶಾನ್ ನಬಿಲ್ (ಕೇರಳ)–2, ಜಿ. ಲಕ್ಷ್ಯ (ಕರ್ನಾಟಕ)–3 ಕಾಲ: 28.17ಸೆ. 

ಬಾಲಕಿಯರು (ಗುಂಪು 1): 1500 ಮೀ ಫ್ರೀಸ್ಟೈಲ್: ಅದಿತಿ ವಿನಾಯಕ ರೆಲೆಕರ್ (ಕರ್ನಾಟಕ)–1, ಪ್ರತೀಕ್ಷಾ ಎನ್ ಗೌಡ (ಕರ್ನಾಟಕ)–2, ಲಿಖಿತಾ ಜಿ ಮೆರುಪುಲಾ (ತೆಲಂಗಾಣ)–3 ಕಾಲ: 19ನಿ,09.58ಸೆ. 

400 ಮೀ ಫ್ರೀಸ್ಟೈಲ್ (ಗುಂಪು 2): ತನ್ವಿ ಗೌರವ್ (ಕರ್ನಾಟಕ)–1, ಐದಿಕಾ ಭಟ್ (ಕರ್ನಾಟಕ)–2, ಐಒನಾ ಶಿಜು (ತೆಲಂಗಾಣ)–3 ಕಾಲ: 4ನಿ,57.66ಸೆ. 

200 ಮೀ ಫ್ರೀಸ್ಟೈಲ್ (ಗುಂಪು 3): ಆರ್. ವಿದುಲಾ (ಕರ್ನಾಟಕ)–1, ಉನ್ನತಿ ರಾವ್ (ಕರ್ನಾಟಕ)–2, ವಿ. ಶ್ರೀಹರಿಣಿ (ತಮಿಳುನಾಡು)–3.  ಕಾಲ: 2ನಿ,24.13ಸೆ. 

100 ಮೀ ಬ್ರೆಸ್ಟ್‌ಸ್ಟ್ರೋಕ್ (ಗುಂಪು3): ಧ್ರುತಿ ಅಭಿಲಾಶ್ (ಕರ್ನಾಟಕ)–1, ಸಂಯುಕ್ತ ಕಾರ್ತಿಕೇಯನ್ (ತೆಲಂಗಾಣ)–2, ಸಿಂಧುರಾ ಕೊಂಗರಾ (ಆಂಧ್ರ)–3 ಕಾಲ; 1ನಿ,26.75ಸೆ. 

50 ಮೀ ಬಟರ್‌ಫ್ಳೈ: ಮಾನ್ಯಾ ಆರ್ ವಾಧ್ವಾ (ಕರ್ನಾಟಕ)–1, ಆದ್ಯಾ ಭಾರದ್ವಾಜ್ (ಕರ್ನಾಟಕ)–2, ದಿತ್ಯಾ ವೆಮುಲಪಲ್ಲಿ (ತೆಲಂಗಾಣ)–3 ಕಾಲ: 31.06ಸೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.