ADVERTISEMENT

ವಿಶೇಷ ಚೇತನರ ಚಳಿಗಾಲದ ಒಲಿಂಪಿಕ್ಸ್‌: ಭಾರತದ ಸ್ಪರ್ಧಿಗಳಿಗೆ ಐದು ಪದಕ

ಪಿಟಿಐ
Published 13 ಮಾರ್ಚ್ 2025, 13:26 IST
Last Updated 13 ಮಾರ್ಚ್ 2025, 13:26 IST
<div class="paragraphs"><p>(ಚಿತ್ರ ಕೃಪೆ–@ESPNCitizenship)</p></div>

(ಚಿತ್ರ ಕೃಪೆ–@ESPNCitizenship)

   

ನವದೆಹಲಿ: ಭಾರತದ ಸ್ಪರ್ಧಿಗಳು, ಇಟಲಿಯ ಟ್ಯೂರಿನ್‌ನಲ್ಲಿ ನಡೆಯುತ್ತಿರುವ ವಿಶೇಷಚೇತನರ ಒಲಿಂಪಿಕ್ಸ್‌ ವಿಶ್ವ ಚಳಿಗಾಲದ ಕ್ರೀಡೆಗಳ ಎರಡನೇ ದಿನವಾದ ಬುಧವಾರ ಎರಡು ಆಟಗಳಲ್ಲಿ ಎರಡು ಚಿನ್ನ, ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದುಕೊಂಡರು. ಇದರಿಂದ ಭಾರತ ಗೆದ್ದ ಪದಕಗಳ ಸಂಖ್ಯೆ ಒಂಬತ್ತಕ್ಕೆ ಏರಿತು.

ಸ್ನೋಬೋರ್ಡಿಂಗ್‌ನಲ್ಲಿ ಮೊದಲ ದಿನ ನಾಲ್ಕು ಪದಕ ಗೆದ್ದಿದ್ದ ಭಾರತದ ಭಿನ್ನಸಾಮರ್ಥ್ಯದ ಸ್ಪರ್ಧಿಗಳು ಎರಡನೇ ದಿನವಾದ ಬುಧವಾರ ಇನ್ನೆರಡು ಪದಕಗಳನ್ನು ಗೆದ್ದರು. ಭಾರತಿ (ಡಿವಿಷನ್ ಎಫ್‌25) ನೊವಿಸ್‌ ಸ್ಲಲೋಮ್‌ ಫೈನಲ್‌ನಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಹರ್ಷಿತಾ ಠಾಕೂರ್ (ಡಿವಿಷನ್‌ ಎಫ್‌26) ಇದೇ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು. ಭಾರತಿ ಅವರಿಗೆ ಇದು ಎರಡನೇ ಚಿನ್ನದ ಪದಕ. ಹರ್ಷಿತಾ ಮೊದಲ ದಿನ ಬೆಳ್ಳಿ ಪದಕ ಗೆದ್ದಿದ್ದರು.

ADVERTISEMENT

ಅಲ್ಪೈನ್ ಸ್ಕೀಯಿಂಗ್‌ನಲ್ಲಿ ಭಾರತದ ತಂಡದ ಸ್ಪರ್ಧಿಗಳು ಒಂದು ಚಿನ್ನ, ಎರಡು ಬೆಳ್ಳಿ ಪದಕಗಳನ್ನು ಗೆದ್ದುಕೊಂಡರು. ನಿರ್ಮಲಾ ದೇವಿ (ಡಿವಿಷನ್‌ ಎಫ್‌06) ಮತ್ತು ರಾಧಾ ದೇವಿ (ಡಿವಿಷನ್‌ ಎಫ್‌01) ಅವರು ಇಂಟರ್‌ಮೀಡಿಯೇಟ್‌ ಜೈಂಟ್‌ ಸ್ಲಲೋಮ್ ಫೈನಲ್‌ನಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿಯ ಪದಕ ಗೆದ್ದುಕೊಂಡರು.

ಅಭಿಷೇಕ್ ಕುಮಾರ್ (ಡಿವಿಷನ್ ಎಂ02) ಅವರು ನೋವಿಸ್‌ ಜೈಂಟ್‌ ಸ್ಲಲೋಮ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರು.

ಒಟ್ಟು ಎಂಟು ಸ್ಪರ್ಧೆಗಳು ನಡೆಯುತ್ತಿದ್ದು, ಭಾರತದ ಸ್ಪರ್ಧಿಗಳು ಆರು ವಿಭಾಗಗಳಲ್ಲಿ ಕಣಕ್ಕೆ ಇಳಿದಿದ್ದಾರೆ. ಅವುಗಳು– ಸ್ನೋಬೋರ್ಡಿಂಗ್‌, ಸ್ನೊಶೂಯಿಂಗ್‌, ಅಲ್ಪೈನ್‌ ಸ್ಕೀಯಿಂಗ್‌, ಸ್ಪೀಡ್‌ ಸ್ಕೇಟಿಂಗ್‌, ಫ್ಲೋರ್‌ಬಾಲ್‌ ಮತ್ತು ಕ್ರಾಸ್‌ ಕಂಟ್ರಿ ಸ್ಕೀಯಿಂಗ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.