ADVERTISEMENT

ವೈದ್ಯರ ಅಥ್ಲೆಟಿಕ್ಸ್‌: ಹುಬ್ಬಳ್ಳಿ ವಿಭಾಗಕ್ಕೆ ಸಮಗ್ರ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 19:21 IST
Last Updated 14 ಏಪ್ರಿಲ್ 2019, 19:21 IST
ವೈದ್ಯರ ರಾಜ್ಯಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಸ್ಪರ್ಧಿಯೊಬ್ಬರು ಜಾವೆಲಿನ್‌ ಎಸೆದ ಕ್ಷಣ
ವೈದ್ಯರ ರಾಜ್ಯಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಸ್ಪರ್ಧಿಯೊಬ್ಬರು ಜಾವೆಲಿನ್‌ ಎಸೆದ ಕ್ಷಣ   

ಹುಬ್ಬಳ್ಳಿ:‌ ಸ್ಟೆಥಸ್ಕೋಪ್‌ ಹಿಡಿದು ರೋಗಿಗಳ ಆರೋಗ್ಯ ಪರೀಕ್ಷೆ ಮಾಡುವ ವೈದ್ಯರು ಭಾನುವಾರ ಮೈದಾನದಲ್ಲಿ ಬೆವರು ಸುರಿಸಿದರು.

ಉತ್ತಮ ಆರೋಗ್ಯಕ್ಕಾಗಿ ದೈಹಿಕ ಚಟುವಟಿಕೆಯಲ್ಲಿ ತೊಡಗಿ ಎಂದು ಸಲಹೆ ನೀಡುವ ವೈದ್ಯರು ಸ್ವತಃ ತಾವೇ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಗಮನ ಸೆಳೆದರು.

ಭಾರತೀಯ ವೈದ್ಯಕೀಯ ಸಂಘದ (ಐಎಂಎ) ರಾಜ್ಯ ಶಾಖೆಯು ವೈದ್ಯರಿಗಾಗಿ ಮೊದಲ ಬಾರಿಗೆ ಹಮ್ಮಿ ಕೊಂಡಿದ್ದ ರಾಜ್ಯಮಟ್ಟದ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಡುಬಂದ ಚಿತ್ರಣವಿದು.

ADVERTISEMENT

30 ವರ್ಷದಿಂದ 76 ವರ್ಷದವರೆಗಿನ ವೈದ್ಯರಿಗೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಧಾರವಾಡ, ಬೆಳಗಾವಿ, ಮಂಗಳೂರು, ಗದಗ, ಶಿವಮೊಗ್ಗ, ಬಳ್ಳಾರಿ, ಕೋಲಾರ ಜಿಲ್ಲೆಗಳ ವೈದ್ಯರು ಪಾಲ್ಗೊಂಡಿದ್ದರು.

5 ಕಿ.ಮೀ., 1500 ಮೀ., 800 ಮೀ., 400ಮೀ., 200 ಮೀ., 100 ಮೀ., ಶಾಟ್‌ಪಟ್‌ ಮತ್ತು ಜಾವಲಿನ್‌ ಎಸೆತ ಸ್ಪರ್ಧೆಗಳು ನಡೆದವು.ಹುಬ್ಬಳ್ಳಿ ಐಎಂಎ ಶಾಖೆ ಸಮಗ್ರ ಪ್ರಶಸ್ತಿ ಪಡೆದುಕೊಂಡರೆ, ಬೆಳಗಾವಿ ಶಾಖೆ ರನ್ನರ್ಸ್ ಅಪ್‌ ಸ್ಥಾನ ಗಳಿಸಿತು.

50 ವರ್ಷ ಮೇಲಿನವರ ಪುರುಷರ ವಿಭಾಗದಲ್ಲಿ ಮಿಲಿಂದ ಹಲಗೇಕರ (ಬೆಳಗಾವಿ), 50 ವರ್ಷದ ಒಳಗಿನವರ ವಿಭಾಗದಲ್ಲಿ ಅರುಣ ವಿ. ಯಳಮಲಿ (ಹುಬ್ಬಳ್ಳಿ), 60 ವರ್ಷದ ಒಳಗಿನವರ ಮಹಿಳೆಯರ ವಿಭಾಗದಲ್ಲಿ ಉಜ್ವಲಾ ಹಲಗೇಕರ (ಬೆಳಗಾವಿ) ವೈಯಕ್ತಿಕ ಪ್ರಶಸ್ತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.