ADVERTISEMENT

ಉನ್ನತ ಸಾಧನೆಗೆ ನಿರಂತರ ಪ್ರಯತ್ನ ಮುಖ್ಯ: ಪ್ರದೀಪಕುಮಾರ್

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 18:23 IST
Last Updated 8 ನವೆಂಬರ್ 2025, 18:23 IST
<div class="paragraphs"><p> ಕುಳಿತವರು: ಸುಜಾತಾ ತಿಲಕ್ ಕುಮಾರ್ (ಎನ್‌ಎಸಿ ನಿರ್ದೇಶಕಿ) ಪ್ರದೀಪಕುಮಾರ್ (ರಾಷ್ಟ್ರೀಯ ತಂಡದ ಮಾಜಿ ಕೋಚ್) ಕೆ.ಎನ್. ತಿಲಕ್ ಕುಮಾರ್ (ಎನ್‌ಎಸಿ ಚೇರ್ಮನ್) ವರುಣ್ ನಿಜಾವನ್ (ಎನ್‌ಎಸಿ ಮುಖ್ಯಸ್ಥ)&nbsp; ಇದ್ದಾರೆ</p></div>

ಕುಳಿತವರು: ಸುಜಾತಾ ತಿಲಕ್ ಕುಮಾರ್ (ಎನ್‌ಎಸಿ ನಿರ್ದೇಶಕಿ) ಪ್ರದೀಪಕುಮಾರ್ (ರಾಷ್ಟ್ರೀಯ ತಂಡದ ಮಾಜಿ ಕೋಚ್) ಕೆ.ಎನ್. ತಿಲಕ್ ಕುಮಾರ್ (ಎನ್‌ಎಸಿ ಚೇರ್ಮನ್) ವರುಣ್ ನಿಜಾವನ್ (ಎನ್‌ಎಸಿ ಮುಖ್ಯಸ್ಥ)  ಇದ್ದಾರೆ

   

ಬೆಂಗಳೂರು: ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಲು ನಿರಂತರ ಪ್ರಯತ್ನ ಮತ್ತು ಶಿಸ್ತು ಮುಖ್ಯ ಎಂದು ಅಂತರರಾಷ್ಟ್ರೀಯ ಈಜು ಕೋಚ್ ಹಾಗೂ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಪ್ರದೀಪಕುಮಾರ್ ಹೇಳಿದರು. 

ಶನಿವಾರ  ‘ನೆಟ್ಟಕಲ್ಲಪ್ಪ ಈಜು ಸ್ಪರ್ಧೆ’ ಯನ್ನು ಉದ್ಘಾಟಿಸಿದ ಅವರು, ‘ನೆಟ್ಟಕಲ್ಲಪ್ಪ ಈಜು ಕೇಂದ್ರವು ಪ್ರತಿವರ್ಷ ಆಯೋಜಿಸುತ್ತಿರುವ ಈಜು ಸ್ಪರ್ಧೆಯಲ್ಲಿ ನಗದು ಪುರಸ್ಕಾರ ನೀಡುತ್ತಿರುವುದು ಸ್ವಾಗತಾರ್ಹ. ಇದರಿಂದ ಮಕ್ಕಳಿಗೆ ಬಹಳ ದೊಡ್ಡ ಪ್ರೋತ್ಸಾಹ ಸಿಗುತ್ತದೆ’ ಎಂದು ಸಂತಸವ್ಯಕ್ತಪಡಿಸಿದರು. 

ADVERTISEMENT

‘ಯಾವುದೇ ಕ್ರೀಡೆಯಲ್ಲಿ ದೊಡ್ಡ ಸಾಧನೆ ಮಾಡಲು ತಂದೆತಾಯಿ ಬಹಳಷ್ಟು ಹಣ ಖರ್ಚು ಮಾಡುತ್ತಾರೆ. ಬಹಳಷ್ಟು ತ್ಯಾಗಗಳನ್ನೂ ಮಾಡುತ್ತಾರೆ. ಮಕ್ಕಳೂ  ಪರಿಶ್ರಮಪಟ್ಟು ಕಲಿಯುತ್ತಾರೆ. ತರಬೇತುದಾರರು ಕೂಡ ಶ್ರಮ‍‍ಪಟ್ಟಿರುತ್ತಾರೆ. ಆದರೆ ಪ್ರತಿಯೊಂದು ಸ್ಪರ್ಧೆಯಲ್ಲಿಯೂ ಮಕ್ಕಳಿಗೆ ಶ್ರೇಷ್ಠ ಸಾಧನೆ ಮಾಡಲಾಗದು.  ಆದ್ದರಿಂದ ತಾಳ್ಮೆಯಿಂದ ನಿರಂತರವಾಗಿ ಅಭ್ಯಾಸ ಮಾಡುತ್ತ ಸಾಗಿದರೆ ಯಶಸ್ಸು ಸಾಧ್ಯ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.