ADVERTISEMENT

ಕ್ಲೆವ್‌ಲ್ಯಾಂಡ್‌ ಕ್ಲಾಸಿಕ್‌ ಸ್ಕ್ವಾಷ್‌ ಟೂರ್ನಿ: ಸೆಮಿಫೈನಲ್‌ಗೆ ಜೋಷ್ನಾ

ಕ್ಲೆವ್‌ಲ್ಯಾಂಡ್‌ ಕ್ಲಾಸಿಕ್‌ ಸ್ಕ್ವಾಷ್‌ ಟೂರ್ನಿ

ಪಿಟಿಐ
Published 2 ಫೆಬ್ರುವರಿ 2020, 18:08 IST
Last Updated 2 ಫೆಬ್ರುವರಿ 2020, 18:08 IST
ಜೋಷ್ನಾ ಚಿನ್ನಪ್ಪ
ಜೋಷ್ನಾ ಚಿನ್ನಪ್ಪ   

ಕ್ಲೆವ್‌ಲ್ಯಾಂಡ್‌, ಅಮೆರಿಕ: ಭಾರತದ ಜೋಷ್ನಾ ಚಿನ್ನಪ್ಪ ಅವರು ಕ್ಲೆವ್‌ಲ್ಯಾಂಡ್‌ ಕ್ಲಾಸಿಕ್‌ ಸ್ಕ್ವಾಷ್‌ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗಯಿಟ್ಟಿದ್ದಾರೆ. ಶನಿವಾರ ರಾತ್ರಿ ನಡೆದ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಅವರು3–6, 11–6, 6–11, 11–8, 11–6ರಿಂದ ಹಾಂಗ್‌ಕಾಂಗ್‌ನ ಆ್ಯನ್ನಿ ವು ಅವರನ್ನು ಸೋಲಿಸಿದರು.

ಟೂರ್ನಿಯಲ್ಲಿ ಐದನೇ ಶ್ರೇಯಾಂಕ ಪಡೆದಿರುವ ಭಾರತದ ಆಟಗಾರ್ತಿಗೆ ಗೆಲುವು ಸುಲಭ ತುತ್ತಾಗಲಿಲ್ಲ. ಕನಿಷ್ಠ ಒಂದು ತಾಸು ನಡೆದ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಎದುರಾಳಿಯನ್ನು ಸದೆಬಡಿಯುವಲ್ಲಿ ಜೋಷ್ನಾ ಯಶಸ್ವಿಯಾದರು.

ಜೋಷ್ನಾ ಅವರಿಗೆ ಮೊದಲ ಸುತ್ತಿನಲ್ಲಿ ಬೈ ಲಭಿಸಿತ್ತು. ಎರಡನೇ ಸುತ್ತಿನ ಹಣಾಹಣಿಯಲ್ಲಿ ಅವರು ಈಜಿಪ್ಟ್‌ನ ಮೆನ್ನಾ ನಾಸರ್‌ ಎದುರು ಸುಲಭವಾಗಿ ಗೆದ್ದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.