ADVERTISEMENT

ಸ್ಕ್ವಾಷ್‌ ಚಟುವಟಿಕೆಗಳು ಸದ್ಯಕ್ಕೆ ಶುರುವಾಗೊಲ್ಲ

ಪಿಟಿಐ
Published 25 ಜೂನ್ 2020, 15:54 IST
Last Updated 25 ಜೂನ್ 2020, 15:54 IST

ನವದೆಹಲಿ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸದ್ಯಕ್ಕೆ ಸ್ಕ್ವಾಷ್‌ ಚಟುವಟಿಕೆಗಳನ್ನು ಪುನರಾರಂಭಿಸದಿರಲು ನಿರ್ಧರಿಸಲಾಗಿದೆ.

‘ಸ್ಕ್ವಾಷ್‌ ಕ್ರೀಡೆಯ ಕೇಂದ್ರ ಸ್ಥಾನಗಳೆನಿಸಿರುವ ನವದೆಹಲಿ, ಮುಂಬೈ ಹಾಗೂ ಚೆನ್ನೈ ನಗರಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಿವೆ. ಹೀಗಾಗಿ ಸೆಪ್ಟೆಂಬರ್‌ಗೂ ಮುನ್ನ ಯಾವುದೇ ಟೂರ್ನಿಗಳನ್ನು ಆಯೋಜಿಸುವ ಸ್ಥಿತಿಯಲ್ಲಿ ನಾವಿಲ್ಲ’ ಎಂದು ಭಾರತ ಸ್ಕ್ವಾಷ್‌ ಮತ್ತು ರ‍್ಯಾಕೆಟ್‌ ಫೆಡರೇಷನ್‌ನ (ಎಸ್‌ಆರ್‌ಎಫ್‌ಐ) ಮಹಾ ಕಾರ್ಯದರ್ಶಿ ಸಿರಸ್‌ ಪೂಂಚಾ ತಿಳಿಸಿದ್ದಾರೆ.

‘ಟೂರ್ನಿಗಳನ್ನು ಆರಂಭಿಸುವ ಮುನ್ನ ಸಿದ್ಧತೆ ಕೈಗೊಳ್ಳಲು ಕ್ರೀಡಾಪಟುಗಳಿಗೆ ಕನಿಷ್ಠ ಆರು ವಾರಗಳಾದರೂ ಸಮಯ ನೀಡಬೇಕು. ಇಲ್ಲದಿದ್ದರೆ ಗಾಯಕ್ಕೊಳಗಾಗುವ ಅಪಾಯವಿರುತ್ತದೆ’ ಎಂದಿದ್ದಾರೆ.

ADVERTISEMENT

‘ಈ ವರ್ಷದ ಜುಲೈ ತಿಂಗಳಿಂದ ತರಬೇತಿ ಶಿಬಿರಗಳನ್ನು ಆರಂಭಿಸುವ ಗುರಿ ಹೊಂದಿದ್ದೆವು. ಪರಿಸ್ಥಿತಿ ಬಿಗಡಾಯಿಸಿರುವ ಕಾರಣ ಈ ಯೋಜನೆಯನ್ನು ಕೈಬಿಟ್ಟಿದ್ದೇವೆ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.